ಬೆಂಗಳೂರಿನಲ್ಲಿ HMPV ಮೊದಲ ಪ್ರಕರಣ ಪತ್ತೆ: ಮಾಹಿತಿ ನೀಡಿದ ಆರೋಗ್ಯ ಇಲಾಖೆ
Update: 2025-01-06 05:12 GMT
ಬೆಂಗಳೂರು: ಚೀನಾದಲ್ಲಿ ಕಾಣಿಸಿಕೊಂಡಿದ್ದ HMPV ವೈರಸ್ ಸೋಂಕಿನ ಭಾರತದ ಮೊದಲ ಪ್ರಕರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿದೆ.
ರಾಜ್ಯ ಆರೋಗ್ಯ ಇಲಾಖೆಯು ಈ ಕುರಿತು ಮಾಹಿತಿಯನ್ನು ನೀಡಿದ್ದು, ಎಂಟು ತಿಂಗಳ ಮಗುವಿನಲ್ಲಿ HMPV ಸೋಂಕು ಪತ್ತೆಯಾಗಿದೆ. ಆದರೆ ಮಗು ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ ಎಂದು ಹೇಳಿದೆ.
ಬೆಂಗಳೂರಿನಲ್ಲಿ ಎಂಟು ತಿಂಗಳ ಮಗುವಿನಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್ಎಂಪಿವಿ) ಇರುವುದು ಪತ್ತೆಯಾಗಿದ್ದು, ಇದು ಭಾರತದಲ್ಲಿ ಮೊದಲ ಬಾರಿಗೆ ದೃಢಪಟ್ಟ ವೈರಸ್ ಪ್ರಕರಣವಾಗಿದೆ. ಯಾವುದೇ ಪ್ರಯಾಣದ ಇತಿಹಾಸವಿಲ್ಲದ ಶಿಶುವನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ HMPV ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.