ಮುಂದಿನ ಬಜೆಟ್‌ನಲ್ಲಿ ಮೊಗವೀರ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ : ಸಿಎಂ ಸಿದ್ದರಾಮಯ್ಯ

Update: 2025-01-05 17:08 GMT

ಬೆಂಗಳೂರು: ಮುಂದಿನ ಬಜೆಟ್‌ನಲ್ಲಿ ಮೊಗವೀರ ಸಮುದಾಯ ಸಲ್ಲಿಕೆ ಮಾಡಿರುವ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ರವಿವಾರ ಅರಮನೆ ಮೈದಾನದಲ್ಲಿ ಮೊಗವೀರ ಸಂಘದಿಂದ ನಡೆದ ಬೃಹತ್ ಮೊಗವೀರ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಅನೇಕ ಸಮುದಾಯಗಳು ಹಿಂದುಳಿದೆ. ಇದಕ್ಕೆ ಮುಖ್ಯ ಕಾರಣ ಜಾತಿ ವ್ಯವಸ್ಥೆ ಎಂದರು.

ಹಿಂದೆ ಕಸುಬಿ️ನ ಆಧಾರದ ಮೇಲೆ ಜಾತಿ ನಿಗದಿ ಪಡಿಸಲಾಗಿತ್ತು. ಬ್ರಾಹ್ಮಣ, ಕ್ಷತ್ರೀಯ, ವೈಷ್ಯರು, ಶೂದ್ರರು ಎನ್ನುವುದಾಗಿ ವಿಭಾಗಿಸಲಾಗಿತ್ತು. ಮೊದಲ️ ಮೂರು ವರ್ಗಗಳಿಗೆ ವಿದ್ಯೆ ಕಲಿಯುವ ಅವಕಾಶವಿತ್ತು. ಆದರೆ ಶೂದ್ರರಿಗೆ ವಿದ್ಯೆ ಕಲಿಯುವ ಅವಕಾಶವಿರಲಿಲ್ಲ. ಇದರಿಂದಾಗಿ ಅವರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದ್ದಾರೆ. ಮೊಗವೀರರು ವಿದ್ಯೆಯಿಂದ ವಂಚಿತರಾಗಿದ್ದಾರೆ. ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಮಕ್ಕಳಿಗೆ ಶಿಕ್ಷಣ ನೀಡಿದಾಗ ಗುಲಾಮಗಿರಿಯಿಂದ ಹೊರಬರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಶಿಕ್ಷಣ ನೀಡಲು ಹೆಚ್ಚಿನ ಗಮನ ಹರಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ನಾನು ಮತ್ತೆ ಮೊಗವೀರ ಸಮುದಾಯವನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ, ಮೊಗವೀರ ಸಮುದಾಯದವರು ಸೇರಿ ಕೇಂದ್ರದ ಮೇಲೆ ಒತ್ತಡ ಹಾಕಿ. ಸಂಘಟನೆ ಮಾಡಿಕೊಂಡು ಈ ಬಗ್ಗೆ ಚರ್ಚೆ ಮಾಡಿ ಎಂದು ಸಿದ್ದರಾಮಯ್ಯ ಹೇಳಿದರು.

ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಜಿ.ಶಂಕರ್ ಮಾತನಾಡಿ, ಬಜೆಟ್‌ನಲ್ಲಿ ಘೋಷಣೆಯಾದ ಸಮುದ್ರ ಆಂಬುಲೆನ್ಸ್ ಯೋಜನೆಯನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಬೇಕು, ಬಂದರಿನ ಹೂಳು ತೆಗೆಯಲು ಡ್ರೆಜ್ಜರ್ ಯಂತ್ರ ಖರೀದಿಸಲು ಮೀನುಗಾರಿಕೆ ಇಲಾಖೆ ಅನುದಾನ ನೀಡುವುದು, ಮೀನುಗಾರಿಗೆ ತೆರಳಿ ದುರ್ಘಟನೆಗೆ ಮೃತಪಟ್ಟವರ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಯೋಜನೆ ರೂಪಿಸಬೇಕು. ಮೀನುಗಾರ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಗೆ ಬಡ್ಡಿ ರಹಿತ ಸಾಲ️ ಯೋಜನೆ ಜಾರಿಗೊಳಿಸುವುದು, ಮೀನುಗಾರರ ಕಲ್ಯಾಣ ಗಮನದಲ್ಲಿ ಇಟ್ಟುಕೊಂಡು ಸಮಗ್ರ ಮೀನುಗಾರಿಕೆ ನೀತಿ ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಮೊಗವೀರರು ಅಂದರೆ ಮೀನುಗಾರರು. ರೈತರು ಹೇಗೆ ಕೃಷಿ ಮಾಡುತ್ತಾರೆಯೋ ಅಂತೆಯೇ ನಮ್ಮವರು ಮೀನು ಹಿಡಿಯುವ ಕಾಯಕ ಮಾಡುತ್ತಾರೆ. ಗಂಗಾಮಾತೆ ಅನುಗ್ರಹವಿದ್ದರೆ ಮಾತ್ರ ನಮಗೆ ಮೀನು ಸಿಗುತ್ತದೆ. ರೈತರಿಗೆ ಸಾಲ️ ಹಾಗೂ ಬಡ್ಡಿ ಮನ್ನಾ ಮಾಡುವ ರೀತಿಯಲ್ಲಿ ಮೀನುಗಾರರಿಗೂ ಅನುಕೂಲ️ ಕಲ್ಪಿಸಬೇಕು. ಹಿಂದುಳಿದ ವರ್ಗದ ಮೊಗವೀರ ಸಮುದಾಯದ ಅಭಿವೃದ್ಧಿಗೆ ಮುಂಬರುವ ಬಜೆಟ್‌ನಲ್ಲಿ ಮೀನುಗಾರರಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಸಿಎಂ ಅವರಿಗೆ ಮನವಿ ಮಾಡಿದರು.

ಸಮಾವೇಶದಲ್ಲಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಸೇರಿದಂತೆ ಮೊಗವೀರ ಸಂಘದ ಅಧ್ಯಕ್ಷರು, ಸದಸ್ಯರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News