ಸರಕಾರವೇ ಅನುಮತಿ ಕೊಟ್ಟರೂ, ಮಹಿಷ ದಸರಾ ಆಚರಣೆಗೆ ನಾವು ಬಿಡಲ್ಲ: ಸಂಸದ ಪ್ರತಾಪ್ ಸಿಂಹ ಸವಾಲು

Update: 2023-09-09 13:24 GMT

ಮೈಸೂರು,ಸೆ.9: ʼʼಬಹುಜನರ ಆಶಯಕ್ಕೆ ವಿರುದ್ಧವಾಗಿ ಆಚರಣೆ ಮಾಡುವ ಮಹಿಷ ದಸರಾಗೆ ಸರ್ಕಾರ ಅನುಮತಿ ಕೊಟ್ಟರೂ, ನಾವು ಬಿಡೋದಿಲ್ಲ. ಹೇಗೆ ಮಾಡುತ್ತಾರೋ ನಾವು ನೋಡುತ್ತೇವೆʼʼ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼʼಚಾಮುಂಡೇಶ್ವರಿ ಸನ್ಮಿಧಿಯಲ್ಲಿ ಅನಾಚಾರ, ಅಪದ್ಧ ಅಸಹ್ಯ ಮಾಡಿದರೆ ನೋಡಿಕೊಂಡು ಸುಮ್ಮನೆ ಕೂರಲು ಅಗುವುದಿಲ್ಲ, ಮಹಿಷ ದಸರಾ ಆಚರಣೆಯನ್ನು 2019 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವ ವಿ.ಸೋಮಣ್ಣ ಅವರ ಸಮ್ಮುಖದಲ್ಲೇ ನಿಲ್ಲಿಸಲಾಗಿದೆ.ಮತ್ತೆ ಯಾವ ಸರಕಾರ ಬಂದರೂ ಆಚರಣೆ ಮಾಡುವಂತಿಲ್ಲʼʼ ಎಂದು ಎಚ್ಚರಿಕೆ ನೀಡಿದರು.

ʼʼಏನೇ ಕಷ್ಟ ಬಂದರೂ ಲಕ್ಷಾಂತರ ಮಂದಿ ಚಾಮುಂಡಿ ತಾಯಿಯ ಬಳಿ ಹೋಗುತ್ತಾರೆ. ಅಂತದರಲ್ಲಿ ತಾಯಿಯನ್ನು ತುಚ್ಚವಾಗಿ ಮಾತನಾಡುವವರಿಗೆ ಹೇಗೆ ಅವಕಾಶ ನೀಡ್ತಾರೆ? ಮೈಸೂರಿಗರು ಈ ವಿಚಾರದಲ್ಲಿ ಒಟ್ಟಾಗಬೇಕು. ನಿಮಗೆ ಏನೇ ಕಷ್ಟ ಬಂದರು ತಾಯಿ ಬಳಿ ಬೇಡಿಕೊಳ್ಳುತ್ತಿರಿ, ಅಂತಹ ತಾಯಿಗೆ ಅವಮಾನವಾಗುವಾಗ ನೀವೆಲ್ಲ ಒಟ್ಟಿಗೆ ಹೋರಾಡಬೇಕು. ಈಗ ಮಹಿಷ ದಸರಾ ಮಾಡುವ ನಾಲ್ಕು ಜನರ ಮನೆಯಲ್ಲಿ ಹೋಗಿ ನೋಡಿ ಅವರ ಹೆಂಡತಿಯರು ಚಾಮುಂಡಿ ತಾಯಿಯನ್ನ ಆರಾಧನೆ ಮಾಡುತ್ತಾರೆ. ಇವರಿಗೆ ಕನಿಷ್ಠ ಅವರ ಮನೆಯವರ ಭಾವನೆಗಳನ್ನ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಆದರೆ ಇಲ್ಲಿ ಬಂದು ಉದ್ದುದ್ದ ಮಾತನಾಡುತ್ತಾರೆʼʼ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News