ಶಿಕ್ಷಣ ಸಂಸ್ಥೆಗಳ ಮಾನ್ಯತೆ ಅವಧಿ ಹತ್ತು ವರ್ಷಗಳ ವರೆಗೆ ವಿಸ್ತರಣೆ

Update: 2024-09-22 16:43 GMT

ಸಾಂದರ್ಭಿಕ ಚಿತ್ರ (Meta AI)

ಬೆಂಗಳೂರು: ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಅದರಂತೆ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಅವಧಿಯು ಹತ್ತು ವರ್ಷಗಳಾಗಿರುತ್ತದೆ. ಈ ಹಿಂದೆ ಮಾನ್ಯತೆ ಅವಧಿಯು ಐದು ವರ್ಷಗಳಾಗಿತ್ತು.

ಮಾನದಂಡಗಳಿಗೆ ಒಳಪಟ್ಟು ಮೊದಲ ಬಾರಿಗೆ ನವೀಕರಣವನ್ನು ಹತ್ತು ವರ್ಷಗಳ ಅವಧಿಗೆ ನೀಡಬೇಕು. ಮುಂದಿನ ಬಾರಿ ಶಾಶ್ವತವಾಗಿ ಮಾನ್ಯತೆ ನವೀಕರಿಸಬಹುದು ಎಂದು ತಿದ್ದುಪಡಿ ತರಲಾಗಿದೆ.

ಮಾನ್ಯತೆ ನವೀಕರಣಕ್ಕಾಗಿ ಸಂಸ್ಕರಣಾ ಶುಲ್ಕದೊಂದಿಗೆ ಸಲ್ಲಿಸಿದ ಅರ್ಜಿಯು ತಿರಸ್ಕೃತಗೊಂಡಲ್ಲಿ, ಪಾವತಿಸಿದ ಸಂಸ್ಕರಣಾ ಶುಲ್ಕವು ಅದೇ ಶೈಕ್ಷಣಿಕ ವರ್ಷದಲ್ಲಿ ಮಾನ್ಯತೆ ನವೀಕರಣ ಪ್ರಕ್ರಿಯೆಗೆ ಗರಿಷ್ಠ ಮೂರು ಬಾರಿಗೆ ಮಾನ್ಯವಾಗಿರುತ್ತದೆ.

ಅದೇ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯು ಸಲ್ಲಿಸಿದ ಅರ್ಜಿಯು ಮೂರು ಬಾರಿ ತಿರಸ್ಕೃತಗೊಂಡಲ್ಲಿ, ಅಂತಹ ಶಿಕ್ಷಣ ಸಂಸ್ಥೆಯು ನಿರ್ದಿಷ್ಟಪಡಿಸಿದಂತೆ ಮರುಪಾವತಿಸಲಾಗದ ಸಂಸ್ಕರಣಾ ಶುಲ್ಕದೊಂದಿಗೆ ಮಾನ್ಯತೆ ನವೀಕರಣ ಕೋರಿ ಹೊಸದಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News