‘ಸಾಕಪ್ಪ ಸಾಕು ಕಾಂಗ್ರೆಸ್ ಸರಕಾರ’ ಪೋಸ್ಟರ್ ಅಂಟಿಸಿ ಅಭಿಯಾನ; ಜೆಡಿಎಸ್ ನಾಯಕರ ವಿರುದ್ಧ ಎಫ್‍ಐಆರ್
Update: 2025-04-12 21:07 IST

ಬೆಂಗಳೂರು: ರಾಜ್ಯ ಸರಕಾರ ತೆರಿಗೆ ಹೆಚ್ಚಿಸಿದೆ ಎಂದು ಪೋಸ್ಟರ್ ಅಂಟಿಸಿ ಅಭಿಯಾನ ನಡೆಸಿದ್ದ ಆರೋಪದಡಿ ಜೆಡಿಎಸ್ ನಾಯಕರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಕಳೆದ ಮೂರು ದಿನದ ಹಿಂದೆ ಜೆಡಿಎಸ್ ಪಕ್ಷದಿಂದ ಸರ್ಕಾರದ ವಿರುದ್ಧ ‘ಸಾಕಪ್ಪ ಸಾಕು ಕಾಂಗ್ರೆಸ್ ಸರಕಾರ’ ಎಂಬ ಹೆಸರಿನಲ್ಲಿ ಪೋಸ್ಟ್ ಅಂಟಿಸಿ ಸರಕಾರವನ್ನು ಟೀಕಿಸಲಾಗಿತ್ತು. ಇಲ್ಲಿನ ಮಹಾರಾಣಿ ಕಾಲೇಜು ಬಸ್ ನಿಲ್ದಾಣ, ಕೆ.ಆರ್ ಸರ್ಕಲ್ ಸೇರಿ ವಿವಿಧ ಕಡೆ ಪೋಸ್ಟರ್ ಅಂಟಿಸಿ, ಕ್ಯೂ ಆರ್ ಕೋಡ್ ಸ್ಕ್ಯಾನ್ ಅಳವಡಿಕೆ ಮಾಡಲಾಗಿತ್ತು. ಆದರೆ, ಯಾವುದೇ ಅನುಮತಿ ಪಡೆಯದೇ ಪೋಸ್ಟರ್‍ಗಳನ್ನು ಅಂಟಿಸಿದ್ದ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.