ಬಿ.ವೈ.ವಿಜಯೇಂದ್ರ ಅವರಿಗೆ BJP ರಾಜ್ಯಾಧ್ಯಕ್ಷ ಸ್ಥಾನ ನೀಡಿ: ರೇಣುಕಾಚಾರ್ಯ ಪಟ್ಟು

Update: 2023-10-28 16:14 GMT

ಬೆಂಗಳೂರು, ಅ.28: ಸ್ವಂತ ವರ್ಚಸ್ಸಿನ ಯುವ ನಾಯಕ ಎಂದು ಪರಿಗಣಿಸುವ ಮೂಲಕ ಪಕ್ಷ ಸಂಘಟನೆ ಗಟ್ಟಿಯಾಗಲು ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಶನಿವಾರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಗಾಡ್ ಫಾದರ್‍ಬೇಕು. ಬಿ.ಎಸ್.ಯಡಿಯೂರಪ್ಪ ಅವರಿಗೆ ಆ ಸಾಮರ್ಥ್ಯವಿತ್ತು. ಅವರ ನಾಯಕತ್ವ ಪಕ್ಷ ಗಟ್ಟಿಗೊಳಿಸಿದೆ. ಈಗಿನ ಪರಿಸ್ಥಿತಿಗೆ ಈಗಾಗಲೇ ಕೆಲವರು ಪಕ್ಷದಿಂದ ಹೊರಗೆ ಹೋಗಿದ್ದಾರೆ. ಅಭದ್ರತೆಯಿಂದ ಯಾರು ಬೇಕಾದರೂ ಪಕ್ಷ ಬಿಟ್ಟು ಹೋಗಬಹುದು ನುಡಿದರು.

                        - ಎಂ.ಪಿ.ರೇಣುಕಾಚಾರ್ಯ 

ಯಡಿಯೂರಪ್ಪ ಬಿಟ್ಟರೆ, ಬೇರೆ ಯಾರು ಕೈಯಲ್ಲಿಂದಲೂ ಪಕ್ಷ ನಿಭಾಯಿಸುವುದಕ್ಕೆ ಆಗಲ್ಲ. ಪಕ್ಷಕ್ಕೆ ಯಡಿಯೂರಪ್ಪರಂತ ಆಕರ್ಷಣೆಯ ನಾಯಕತ್ವ ಬೇಕು ಎಂದ ಅವರು, ವಿಜಯೇಂದ್ರ ಪರವಾಗಿ ಮಾತಾನಾಡಿದರೆ ಯಡಿಯೂರಪ್ಪ ಮಾತನಾಡಿಸಿದರು ಎನ್ನುತ್ತಾರೆ. ಆದರೆ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗುವುದರಲ್ಲಿ ತಪ್ಪೇನು?. ವಿಜಯೇಂದ್ರ ಒಬ್ಬ ಯುವ ನಾಯಕ, ಅವರಿಗೆ ಪಕ್ಷದ ನಾಯಕತ್ವ ಕೊಟ್ಟರೆ ತಪ್ಪೇನು. ಅವರು ತಮ್ಮದೇ ಆದ ಸ್ವಂತ ಬಲದಿಂದ ಬೆಳೆಯುತ್ತಿದ್ದಾರೆ ಎಂದು ಹೇಳಿದರು.

ಈ ಹಿಂದೆ ಯಡಿಯೂರಪ್ಪರನ್ನು ನಂಬಿಯೇ ಕಾಂಗ್ರೆಸ್, ಜೆಡಿಎಸ್‍ನಿಂದ ಶಾಸಕರು ಬಂದರು. ಬಿಜೆಪಿಯಲ್ಲಿ ಈಗಾಗಲೇ ಬಹಳ ಜನರು ಬೇಸತ್ತಿದ್ದಾರೆ. ಮುಂದೆ ಅವರೆಲ್ಲ ಬಿಜೆಪಿ ಬಿಟ್ಟು ಹೋಗುತ್ತಾರೆ. ಬಿಜೆಪಿಯನ್ನು ಮತದಾರರು ಸೋಲಿಸಿಲ್ಲ, ಸೋಲಿಸಿದ್ದು ನಮ್ಮವರೇ ಎಂದು ಅಸಮಾಧಾನ ಹೊರ ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News