ಮೊರಾರ್ಜಿ ದೇಸಾಯಿ ವಸತಿ ಶಾಲೆ - ಕಾಲೇಜುಗಳಿಗೆ 808 ಹುದ್ದೆ ಭರ್ತಿಗೆ ಸರಕಾರ ಒಪ್ಪಿಗೆ

Update: 2023-10-18 15:11 GMT

ಬೆಂಗಳೂರು :ಮೊರಾರ್ಜಿ ದೇಸಾಯಿ ವಸತಿ ಶಾಲೆ ಉನ್ನತೀಕರಣ, ವಿದ್ಯಾರ್ಥಿಗಳ ದಾಖಲಾತಿ ದ್ವಿಗುಣ, ಹೊಸದಾಗಿ ಹತ್ತು ವಸತಿ ಶಾಲೆ ಆರಂಭ ತೀರ್ಮಾನ ಹಿನ್ನಲೆಯಲ್ಲಿ 808 ಹುದ್ದೆಗಳ ಭರ್ತಿ ಗೆ ಸರ್ಕಾರ ಅನುಮೋದನೆ ನೀಡಿದೆ.

808 ಹುದ್ದೆಗಳ ಪೈಕಿ 10 ಪ್ರಿನ್ಸಿಪಾಲ್, 248 ಉಪನ್ಯಾಸಕರು, 60 ಶಿಕ್ಷಕರು ಸೇರಿದ್ದಾರೆ. ಈ ಪೈಕಿ 10  ಹೊಸ  ಮೊರಾರ್ಜಿ ದೇಸಾಯಿ ಶಾಲೆಗೆ 100 ಹುದ್ದೆ ಕೆಪಿ ಎಸ್ ಸಿ ಯಿಂದ ನೇಮಕಕ್ಕೂ ಹಣಕಾಸು ಇಲಾಖೆ ಅನುಮತಿ ನೀಡಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು, ಪ್ರಿನ್ಸಿಪಾಲ್, ಉಪನ್ಯಾಸಕರು, ಶಿಕ್ಷಕರು, ಇತರೆ ಸಿಬ್ಬಂದಿ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು.  ಇದರ ಬೆನ್ನಲ್ಲೇ 708 ಹುದ್ದೆ ಹೊರಗುತ್ತಿಗೆ, 100 ಖಾಯಂ ಹುದ್ದೆಭರ್ತಿ ಗೆ ಅನುಮತಿ ನೀಡಿದೆ.

62 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6 ರಿಂದ 12 ನೇ ತರಗತಿ ವರೆಗೆ ಉನ್ನತೀಕರಣಕ್ಕೆ 558 ಹುದ್ದೆ, 50 ಮೊರಾರ್ಜಿ ದೇಸಾಯಿ ವಸತಿ ಶಾಲೆ ಗಳ ವಿದ್ಯಾರ್ಥಿಗಳ ದ್ವಿಗುಣ ಕ್ಕೆ 250 ಹುದ್ದೆ , 6 ರಿಂದ 10 ನೇ ತರಗತಿ ವರೆಗೆ 10 ಹೊಸ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲು 100 ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಇದರಿಂದ  ಸಾವಿರಾರು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಆಗಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.

ಸಮುದಾಯದ ಶಿಕ್ಷಣ ಕ್ಕೆ ಆದ್ಯತೆ ನೀಡುವ ಸಂಬಂಧ  ಈ ಬಗ್ಗೆ ತ್ವರಿತ ಕ್ರಮ ಕೈಗೊಂಡ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News