ಮೈಕ್ರೋ ಫೈನಾನ್ಸ್​ ಕಿರುಕುಳ | ಕಠಿಣ ಕಾನೂನು ತರುವ ಕೆಲಸ ಮಾಡುತ್ತೇವೆ : ಗೃಹ ಸಚಿವ ಜಿ.ಪರಮೇಶ್ವರ್

Update: 2025-01-24 16:02 IST
Photo of G.Parameshwar

ಜಿ.ಪರಮೇಶ್ವರ್

  • whatsapp icon

ಬೆಂಗಳೂರು : ʼಮೈಕ್ರೋ ಫೈನಾನ್ಸ್​ ಕಿರುಕುಳ ಸಂಬಂಧ ಈಗಾಗಲೇ ಸಾಕಷ್ಟು ದೂರುಗಳು ಬಂದಿದ್ದು, ಕಠಿಣ ಕಾನೂನು ತರುವ ಕೆಲಸ ಮಾಡುತ್ತೇವೆʼ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.

ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಬ್ಯಾಂಕ್​ ನಿಯಮಗಳ ಪ್ರಕಾರ ಸಾಲ ವಸೂಲಾತಿಗೆ ಕಾನೂನು ಇದೆ. ಆದರೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಎದುರಿಸಲು ಸದ್ಯ ಇರುವ ಕಾನೂನುಗಳು ಪರಿಣಾಮಕಾರಿಯಾಗಿಲ್ಲ ಎಂಬ ವರದಿ ಇದೆ. ಕಠಿಣ ಕಾನೂನು ತರುವ ಕೆಲಸ ಮಾಡುತ್ತೇವೆ. ಕಿರುಕುಳ ಆಗುತ್ತಿರುವುದನ್ನು ನಿಲ್ಲಿಸಲಾಗುತ್ತದೆʼ ಎಂದು ತಿಳಿಸಿದರು.

ʼಬ್ಯಾಂಕ್‌ಗಳಿಂದ​ ಸಾಲ ಪಡೆದಾಗ ಹಲವಾರು ಸಹಿ ಕಡೆ ಹಾಕಿಸಲಾಗುತ್ತದೆ. ಯಾಕೆ ಸಹಿ ಮಾಡುತ್ತೇವೆ ಎಂದು ಗ್ರಾಹಕರಿಗೆ ಗೊತ್ತಾಗುವುದಿಲ್ಲ. ಇದರ ಆಧಾರದ ಮೇಲೆ ಮನೆ ರೇಡ್​, ಸೀಝ್​ ಮಾಡುತ್ತಾರೆ. ಕಾನೂನಿನಲ್ಲಿ ಪರಿಹಾರ ಕಂಡು ಹಿಡಿಯಬೇಕು. ‌ಮುಖ್ಯಮಂತ್ರಿಗಳು ಸಭೆ ಕರೆಯುತ್ತೇವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ವರದಿಯಾಗಿರುವ ಪ್ರಕರಣಗಳ ಬಗ್ಗೆ ಚರ್ಚೆ ನಡೆಸುತ್ತೇವೆʼ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News