ಗೃಹ ಲಕ್ಷ್ಮೀ ಯೋಜನೆ ಹಣ ವಿಳಂಬ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದೇನು?

Update: 2024-11-28 18:30 GMT

ಬೆಂಗಳೂರು: ಗೃಹ ಲಕ್ಷ್ಮೀ ಯೋಜನೆ ಹಣ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರತಿಕ್ರಿಯಿಸಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಮಾಧ್ಯಮದ ಮುಂದೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಒಂದು ತಿಂಗಳದ್ದು ತಡವಾಗಿದೆ. ನಾಲ್ಕೈದು ದಿನದಲ್ಲಿ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದಿದ್ದಾರೆ.

ಕಳೆದ ಎರಡು ತಿಂಗಳಿಂದ ಮಹಿಳೆಯರ ಖಾತೆಗೆ ಹಣ ಬಿದ್ದಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನಲೆ ಸಚಿವೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಸರ್ಕಾರಿ ನೌಕರರಿಗೂ ಸಂಬಳ ಕೊಡುವಾಗ ಒಂದು ತಿಂಗಳ ಬಳಿಕ ಇನ್ನೊಂದು ತಿಂಗಳ ಹಣ ಹಾಕ್ತೀವಿ. 2 ತಿಂಗಳು ತಡ ಆಗಿರುವುದು ಸತ್ಯ. ಆದರೆ ಈ ಸಮಸ್ಯೆಯನ್ನು 4-5 ದಿನಗಳಲ್ಲಿ ಬಗೆಹರಿಸುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.

ಚುನಾವಣೆ ಹಿನ್ನೆಲೆ ಹಣ ಹಾಕಲಾಗಿತ್ತು ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವೆ, ಚುನಾವಣೆ ಹಿನ್ನೆಲೆ ನಾವು ಹಣ ಹಾಕಲ್ಲ. 14 ತಿಂಗಳು ಯಾವುದೇ ಚುನಾವಣೆ ಇರಲಿಲ್ಲ. ಆದರೆ 14 ತಿಂಗಳಿಂದ ಹಣ ಹಾಕ್ತಿದ್ದೇವೆ. ಚುನಾವಣೆಗಾಗಿ ಹಣ ಹಾಕುವುದಾಗಿದ್ದರೆ ಚುನಾವಣೆ ಸಮಯದಲ್ಲಿ ಮಾತ್ರ ಹಾಕ್ತಿದ್ವಿ ಎಂದು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News