ಗಾಳಿಪಟಕ್ಕೆ ಹತ್ತಿದಾರ ಬಳಸುವಂತೆ ಮಾರ್ಗಸೂಚಿ ಪ್ರಕಟ

Update: 2024-10-24 15:59 GMT

ಸಾಂದರ್ಭಿಕ ಚಿತ್ರ(Meta AI)

ಬೆಂಗಳೂರು : ರಾಜ್ಯ ಸರಕಾರ ಗಾಳಿಪಟಗಳನ್ನು ಹಾರಿಸುವ ಕುರಿತಾಗಿ ಮಾರ್ಗಸೂಚಿಯನ್ನು ಹೊರಡಿಸಿದ್ದು, ಗಾಳಿಪಟಗಳಿಗೆ ಹತ್ತಿಯಿಂದ ಮಾಡಿದ ದಾರಗಳನ್ನು ಮಾತ್ರ ಬಳಸಬೇಕು ಎಂದು ತಿಳಿಸಿದೆ.

ಯಾವುದೇ ವ್ಯಕ್ತಿ, ಅಂಗಡಿಗಳು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು, ನೈಲಾನ್ ಮತ್ತು ಗಾಜು ಮತ್ತಿತರ ಅಪಾಯಕಾರಿ ವಸ್ತುಗಳನ್ನು ಬಳಸಿ ಚೀನಿ ಮಾಂಜಾ, ಚೀನಿ ದಾರಗಳನ್ನು ತಯಾರು ಮಾಡುವುದು, ದಾಸ್ತಾನು ಮಾಡುವುದು ಹಾಗೂ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

ಹೀಗಾಗಿ ಚೀನಿ ದಾರಗಳನ್ನು ಗಾಳಿಪಟಗಳಿಗೆ ಬಳಸುವಂತಿಲ್ಲ. ಹತ್ತಿಯಿಂದ ಮಾಡಿದ ದಾರಗಳಿಗೂ ಚೂಪಾದ, ಲೋಹ ಅಥವಾ ಗಾಜಿನ ವಸ್ತುಗಳನ್ನು ಬಳಸುವಂತಿಲ್ಲ ಎಂದು ರಾಜ್ಯ ಸರಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News