ಹಾಸನ: ಪ್ರವಾಸಿ ಮಂದಿರದ ಆವರಣದಲ್ಲಿ ಮುಖ್ಯ ಪೇದೆ ಆತ್ಮಹತ್ಯೆ
ಹಾಸನ: ನಗರದ ಎನ್.ಆರ್. ವೃತ್ತದ ಬಳಿ ಇರುವ ಪ್ರವಾಸಿ ಮಂದಿರದ ಕಟ್ಟಡದ ಹಿಂಭಾಗ ಕೆ.ಎಸ್.ಆರ್.ಪಿ.ಮುಖ್ಯ ಪೇದೆ ಓರ್ವ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಮುಖ್ಯಪೇದೆ ರಾಜೇಂದ್ರ (೫೬) ಎಂದು ಗುರುತಿಸಲಾಗಿದೆ.
ಅವರು ರವಿವಾರ ರಾತ್ರಿ ಕಟ್ಟಡದ ಹಿಂಭಾಗದಲ್ಲಿ ಹಾದು ಹೋಗಿರುವ ಟೆಲಿಪೋನ್ ಕೇಬಲ್ ನಲ್ಲಿ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಕೇಬಲ್ ವೈರನ್ ಕುತ್ತಿಗೆಗೆ ಬಿಗಿದುಕೊಳ್ಳಲು ಹೋಗಿ ನಂತರ ಕೇಬಲ್ ತುಂಡಾದ ಪರಿಣಾಮ ಕೆಳಗೆ ಬಿದ್ದ ಪರಿಣಾಮ ಅಲ್ಲಿನ ಸಿಮೆಂಟ್ ಕಟ್ಟೆಗೆ ತಲೆ ಮೇಲೆ ಪೆಟ್ಟು ಬಿದ್ದು ರಕ್ತ ಸೋರಿಕೆ ಆಗಿ ಮೃತಪಟ್ಟಿದ್ದಾರೆನ್ನಲಾಗಿದೆ.
ಮೃತ ರಾಜೇಂದ್ರ ಮಾನಸಿಕ ಖಿನ್ನತೆಗೆ ಒಳಗಾದ ಕಾರಣ ನಿಮಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆಂದು ಕೆ.ಎಸ್.ಆರ್.ಪಿ.ಅಧಿಕಾರಿಗಳು ತಿಳಿಸಿದ್ದಾರೆ. ರವಿವಾರದಂದು ತಮ್ಮ ಕರ್ತವ್ಯ ನಿರ್ವಹಿಸಿರುವುದಾಗಿಯೂ ಕೆ.ಎಸ್.ಆರ್.ಪಿ.ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಡೆತ್ ನೋಟ್ ಪತ್ತೆ
ರಾಜೇಶ್ ಕೈ ಬರದಲ್ಲಿ (ಹಸ್ತಾಂತರ) ಡೆತ್ ನೋಟ್ ಪತ್ತೆಯಾಗಿದೆ. ಆದರೇ ಇದರಲ್ಲಿ ಯಾವುದೇ ಸಹಿ ಹಾಕಿರುವುದಿಲ್ಲ. ಹಾಸನ ನಗರ ಠಾಣೆ ಪೊಲೀಸರು ಹಾಗೂ ಮಹಿಳಾ ಸ್ಕೀನ್ ಆಫ್ ಕ್ರೈಂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದಾಖಲಿಸಿದರು.