ʻಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿಗಳ ವಿಧೇಯಕʻಕ್ಕೆ ವಿಧಾನಸಭೆಯಲ್ಲಿ ಮತ್ತೆ ಅಂಗೀಕಾರ

Update: 2024-02-29 13:41 GMT

ಫೈಲ್‌ ಚಿತ್ರ

ಬೆಂಗಳೂರು : ವಿಧಾನಸಭೆ ಅಂಗೀಕಾರವಾದ ಮತ್ತು ಪರಿಷತ್ತಿನಲ್ಲಿ ತಿರಸ್ಕೃತಗೊಂಡ ರೂಪದಲ್ಲಿನ ‘ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ’ವು ಸೇರಿ ಪೂರಕ ಅಂದಾಜುಗಳು, ಧನವಿನಿಯೋಗ ವಿಧೇಯಕ ಸೇರಿದಂತೆ ಪ್ರತಿಪಕ್ಷಗಳ ಸಭಾತ್ಯಾಗದ ಮಧ್ಯೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು.

ಗುರುವಾರ ವಿಧಾನಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದ್ದರು. ಈ ವೇಳೆ ಶಾಸನ ರಚನೆ ಕಲಾಪಕ್ಕೆ ಸ್ಪೀಕರ್ ಖಾದರ್ ಅವಕಾಶ ಕಲ್ಪಿಸಿದರು. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಿಧೇಯಕ ಮಂಡಿಸಿ ಅಂಗೀಕಾರಕ್ಕೆ ಕೋರಿದರು. ಸ್ಪೀಕರ್ ಅವರು ವಿಧೇಯಕ ಮತಕ್ಕೆ ಹಾಕಿದ ವೇಳೆ ಧ್ವನಿಮತದ ಅಂಗೀಕಾರ ದೊರೆಯಿತು.

ಇದೇ ವೇಳೆ 2023-24ನೆ ಸಾಲಿನ ಪೂರಕ ಅಂದಾಜುಗಳು-ಎರಡನೇ ಹಾಗೂ ಅಂತಿಮ ಕಂತ್ತಿನ ಬೇಡಿಕೆಗಳ ಪ್ರಸ್ತಾವಗಳು, ಧನವಿನಿಯೋಗ, ಮೋಟಾರ್ ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ, ಮೋಟಾರ್ ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕ, ಸಿವಿಲ್ ಪ್ರಕ್ರಿಯಾ ಸಂಹಿತೆ(ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News