ಬಂಡೀಪುರದಲ್ಲಿ ರಾತ್ರಿ ಸಂಚಾರ ತೆರವು ಪರಿಶೀಲನೆ : ಗೃಹ ಸಚಿವ ಜಿ.ಪರಮೇಶ್ವರ್

Update: 2024-11-13 19:03 IST
Photo of  G.Parameshwar

ಜಿ.ಪರಮೇಶ್ವರ್ 

  • whatsapp icon

ಬೆಂಗಳೂರು : ಬಂಡೀಪುರ ಮಾರ್ಗ ವ್ಯಾಪ್ತಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವ ಸಂಬಂಧ ಪುನರ್ ಪರಿಶೀಲನೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆಯೂ ಅನೇಕ ಸಲ ರಾತ್ರಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಸಾರ್ವಜನಿಕರು ಮತ್ತು ಪ್ರಾಣಿಗಳಿಗೆ ಸಮಸ್ಯೆ ಆಗುತ್ತೆ ಎನ್ನುವ ಕಾರಣಕ್ಕಾಗಿ ತಾತ್ಕಲಿಕವಾಗಿ ಸಂಚಾರ ನಿಷೇಧ ಮಾಡಲಾಯಿತು. ಇದೀಗ ಅದನ್ನು ಮತ್ತೆ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಚಿವ ಸಂಪುಟ ವಿಸ್ತರಣೆ ಆಗುವ ಬಗ್ಗೆ ನನಗೆ ಗೊತ್ತಿಲ್ಲ. ಇದೆಲ್ಲ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಡುವೆ ನಡೆಯುವ ಚರ್ಚೆ. ಸಿಎಂ ಹೊಸದಿಲ್ಲಿಗೆ ಹಿಂದೆ ಹೋಗಿದ್ದಾಗ, ಈ ವಿಚಾರ ಚರ್ಚೆಗೆ ಬಂದಿತ್ತು ಎಂದರು.

ದರ್ಶನ್ ಮಧ್ಯಂತರ ತಡೆ ತೆರವು ಕೋರಿ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಕೆ ವಿಳಂಬವಾಗಿರುವುದಕ್ಕೆ ಪ್ರತಿಕ್ರಿಯಿಸಿ, ಮೇಲ್ಮನವಿ ಸಲ್ಲಿಕೆಗೆ ವಿಳಂಬ ಆಗಿಲ್ಲ. ಯಾವ ದಿನಾಂಕದಲ್ಲಿ ಕೇಳಿದ್ದಾರೆ, ಯಾವಾಗ ತೀರ್ಮಾನ ಮಾಡಬೇಕೆಂದು ಗೃಹ ಇಲಾಖೆ ಕಾರ್ಯದರ್ಶಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾನೂ ಕೂಡಾ ಅವರಿಗೆ ಮೇಲ್ಮನವಿಗೆ ಹೋಗುವುದಾದರೆ ಹೋಗಿ ಎಂದೇ ಸೂಚಿಸಿದ್ದೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News