ನಾನು ರಾಜಕೀಯ ಹೋರಾಟಗಾರ ಹೊರತು, ವ್ಯಾಪಾರಸ್ಥನಲ್ಲ: ಬಿ.ಕೆ.ಹರಿಪ್ರಸಾದ್

Update: 2023-12-05 17:35 GMT

ಬೆಳಗಾವಿ: ನಾನು ರಾಜಕೀಯ ಹೋರಾಟಗಾರನೇ ಹೊರತು ವ್ಯಾಪಾರಸ್ಥನಲ್ಲ ಎಂದು ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ಮಂಗಳವಾರ ವಿಧಾನ ಪರಿಷತ್ತಿನ ಕಲಾಪದ ವೇಳೆ ಮೊದಲ ಸಾಲಿನ ಆಸನದಲ್ಲಿದ್ದ ಹರಿಪ್ರಸಾದ್ ಕೊನೆಯ ಸಾಲಿಗೆ ಹೋಗಿದ್ದಾರೆಂಬ ಬಿಜೆಪಿ, ಜೆಡಿಎಸ್ ಸದಸ್ಯರು ಉಲ್ಲೇಖಿಸಿದಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಸುದೀರ್ಘ ರಾಜಕಾರಣದಲ್ಲಿ ಯಾವತ್ತೂ ಪ್ರತಿಪಕ್ಷಗಳಿಂದ ನನಗೆ ತೊಂದರೆ ಆಗಿಲ್ಲ. ಇಡಿ, ಐಟಿ ಮೂಲಕ ತೊಂದರೆ ನೀಡಿಲ್ಲ. ಆದರೆ, ಜೊತೆಯಲ್ಲಿರುವ ಸ್ನೇಹಿತರೇ ಬೆನ್ನಿಗೆ ಚೂರಿ ಹಾಕಿದಾಗ ನೋವಾಗಿದೆ. ಅದನ್ನು ತಡೆದುಕೊಂಡಿರುವುದೇ ದೊಡ್ಡದು’ ಎಂದು ತಮ್ಮ ಸ್ಥಿತಿಯನ್ನು ಬಿಚ್ಚಿಟರು.

ಸದನವನ್ನು ನಡೆಸಿದ ಸುದೀರ್ಘ ಅನುಭವ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗಿದೆ. 40 ವರ್ಷ ಕಾಂಗ್ರೆಸ್ ವಿರುದ್ಧವಾಗಿದ್ದರೂ ಸದನದಲ್ಲಿ ಪ್ರಜಾಪ್ರಭುತ್ವ, ಸಂವಿಧಾನದ ತಿರುಳನ್ನು ನೀವು ಎತ್ತಿ ಹಿಡಿದಿದ್ದೀರಿ, ಅದಕ್ಕಾಗಿ ಧನ್ಯವಾದ ಎಂದ ಅವರು, ನಾನು ಪ್ರತಿಪಕ್ಷ ನಾಯಕನಾಗಿದ್ದಾಗ ನನಗೆ ಬಿಜೆಪಿಯವರೆಲ್ಲರೂ ಸಹಕಾರ ಕೊಟ್ಟಿದ್ದರು. ಹಾಗಾಗಿ ಅವರಿಗೂ ಧನ್ಯವಾದ. ಇಲ್ಲಿನ ಕೆಲವರ ಬಗ್ಗೆ ಒಳ್ಳೆಯ ಗೌರವ ಇದೆ. ಮರಿತಿಬ್ಬೇಗೌಡರನ್ನು ಗುರು ಎಂದು ಒಪ್ಪಿಕೊಂಡಿದ್ದೇನೆ ಎಂದರು.

ಇನ್ನೂ, ನಾನು ರಾಜಕೀಯ ಹೋರಾಟಗಾರನೇ ಹೊರತು ವ್ಯಾಪಾರಸ್ಥನಲ್ಲ. ಜತೆಗೆ ರಾಜಕೀಯ ನಿಂತ ನೀರಲ್ಲ, ಹರಿಯುತ್ತಾ ಹೋಗಲಿದೆ. ರಾಜ್ಯಸಭೆಯಲ್ಲಿ ದೊಡ್ಡವರು ಮಾತನಾಡುವಾಗ ಕೇಳಿಕೊಂಡು ಕಲಿಯುತ್ತಿದ್ದೆವು. ಇಲ್ಲಿಯೂ ಹೊರಟ್ಟಿ, ಮರಿತಿಬ್ಬೇಗೌಡರಿಂದ ಕಲಿಯುವುದಿದೆ. ಇಲ್ಲಿ ನಾನು ಮಾತನಾಡುವಾಗ ಯಾರ ವಿರುದ್ಧ ವೈಯಕ್ತಿಕವಾಗಿ ಮಾತನಾಡಿಲ್ಲ. ಅಂತಹ ಉದ್ದೇಶವೂ ಇರಲಿಲ್ಲ. ಆದರೆ ಮಾತಿನ ಭರಾಟೆಯಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ವಿರುದ್ಧ ಕೆಲವು ಬಾರಿ ಟೀಕಿಸಿದ್ದೇನೆ. ಅವರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News