ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಮರ ಕಡಿತಲೆ ಪ್ರಕರಣ: ಸಂಸದ ಪ್ರತಾಪ್‌ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು

Update: 2023-12-31 15:24 GMT

ವಿಕ್ರಂ ಸಿಂಹ

ಬೇಳೂರು:  ನಂದಗೋಡನಹಳ್ಳಿಯ  10 ಎಕರೆ ಸರ್ಕಾರಿ ಗೋಮಾಳದಲ್ಲಿ 126 ಮರಗಳನ್ನು ಕಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ , ಬಂಧಿತನಾಗಿರುವ ಸಂಸದ ಪ್ರತಾಪ್‌ ಸಿಂಹ ಸಹೋದರ ವಿಕ್ರಂ ಸಿಂಹಗೆ ಬೇಲೂರು ನ್ಯಾಯಾಲಯದ ಸೀನಿಯರ್‌ ಸಿವಿಲ್‌ ಜಡ್ಜ್‌ ಜಾಮೀನು ಮಂಜೂರು ಮಾಡಿ ಅದೇಶ ಹೊರಡಿಸಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೋಡನಹಳ್ಳಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ನೂರಾರು ಮರ ಕಡಿದು ಸಾಗಿಸಿದ ಆರೋಪದಡಿ ವಿಕ್ರಮ್ ಸಿಂಹ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದರು.

ಬಿಡುಗಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ಯಕ್ಕೆ ಜಯ ಸಿಕ್ಕಿದೆ. ಈ ಆಪಾದನೆ ಎಲ್ಲಾ ರಾಜಕೀಯ ಪಿತೂರಿಯಾಗಿದೆ. ಸತ್ಯಕ್ಕೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದಂತಾಗಿದೆ ಎಂದು ಹೇಳಿದ್ದಾರೆ.

ವಿಕ್ರಂ ಸಿಂಹ ಪರ ವಕೀಲರು ಮಾಧ್ಯಮದೊಂದಿಗೆ ಮಾತನಾಡಿ, ಅರಣ್ಯ ಕಾಯಿದೆ ಸಂಬಂಧಿಸಿದಂತೆ ಹಾಕಲಾಗಿದ್ದ ಎಲ್ಲಾ ಸೆಕ್ಷನ್‌ ಗಳು ಜಾಮೀನು ನೀಡಬಹುದಾದ ಆರೋಪಗಳಾಗಿದ್ದು, ನ್ಯಾಯಾಲಯವು ಇದೆಲ್ಲವನ್ನು ಪರಿಗಣಿಸಿ ಅವರಿಗೆ ಯಾವುದೇ ಶರತ್ತು ವಿಧಿಸದೆ ಜಾಮೀನು ನೀಡಿದೆ ಎಂದರು

ಏನಿದು ಪ್ರಕರಣ?

ಬೇಲೂರು ತಾಲೂಕಿನ ನಂದಗೋಡನಹಳ್ಳಿಯ 10 ಎಕರೆಯಲ್ಲಿ ಬೆಳೆದಿದ್ದ 126 ಮರಗಳನ್ನು ಕಡಿಯಲಾಗಿದ್ದು, ಈ ಸಂಬಂಧ ಬೇಲೂರು ಆರ್‌ಎಫ್‌ಒ, ಜಮೀನಿನ ಮಾಲೀಕರಾದ ಜಯಮ್ಮ, ರಾಕೇಶ್ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಡಿದಿರುವ ಮರಗಳನ್ನು ಅರಣ್ಯ ಇಲಾಖೆ ಡಿಪೊದಲ್ಲಿ ಸಂಗ್ರಹಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News