ಸರಕಾರಿ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಗೌರವಧನ ಹೆಚ್ಚಳ: ರಾಜ್ಯ ಸರ್ಕಾರ ಆದೇಶ

Update: 2024-08-12 17:19 GMT

Photo credit: cm.karnataka.gov.in

ಬೆಂಗಳೂರು: ರಾಜ್ಯ ಸರಕಾರವು ನೇಮಿಸಿದ್ದ ವೇತನ ಪರಿಷ್ಕರಣೆ ಸಮಿತಿ ವರದಿ ಆಧರಿಸಿ ಸರಕಾರಿ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರಿಗೆ 5 ರಿಂದ 8 ಸಾವಿರ ರೂಪಾಯಿವರೆಗೆ ಗೌರವಧನ ಹೆಚ್ಚಿಸಲಾಗಿದೆ.

ಸೋಮವಾರ ಉನ್ನತ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದ್ದು, ಎಐಸಿಟಿಯು ಮಾನದಂಡ ಇರುವವರಿಗೆ ಸರಕಾರಿ ಕಾಲೇಜುಗಳಲ್ಲಿ 5 ವರ್ಷ ಮೇಲ್ಪಟ್ಟವರಿಗೆ 32 ಸಾವಿರ, ಪಾಲಿಟೆಕ್ನಿಕ್‍ಗಳಲ್ಲಿ 28 ಸಾವಿರ ರೂ. ಗೌರವಧನ ಹಾಗೂ 5 ವರ್ಷ ಒಳಗಿನವರಿಗೆ ಕ್ರಮವಾಗಿ 30 ಸಾವಿರ ರೂ. ಹಾಗೂ 26 ಸಾವಿರ ಸಾವಿರ ರೂ. ನೀಡಲಾಗುತ್ತದೆ. ಇನ್ನು ಎಐಸಿಟಿಯು ಮಾನದಂಡಕ್ಕಿಂತ ಕಡಿಮೆ ಹಾಗೂ 5 ವರ್ಷ ಪೂರೈಸಿದವರಿಗೆ 28 ಸಾವಿರ ರೂ. ಹಾಗೂ 24 ಸಾವಿರ ರೂ. ನಿಗದಿ ಮಾಡಲಾಗಿದೆ ಎಂದು ತಿಳಿಸಿದೆ.

ಉನ್ನತ ಶಿಕ್ಷಣ ಇಲಾಖೆಯ ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ವಾರಕ್ಕೆ ಗರಿಷ್ಠ 15 ಗಂಟೆ, ಸರಕಾರಿ ಪಾಲಿಟೆಕ್ನಿಕ್‍ಗಳು 17 ಗಂಟೆ, ಮತ್ತು ಸರಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅರೆಕಾಲಿಕ ಉಪನ್ಯಾಸಕರುಗಳಿಗೆ 14 ಗಂಟೆಗಳ ಕಾರ್ಯಭಾರವನ್ನು ನಿಗದಿಪಡಿದಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News