ರಾಜ್ಯದಲ್ಲಿ 'ಸೋನಿಯಾ ಶಿಕ್ಷಣ ನೀತಿ’ಯನ್ನು ಜಾರಿಗೆ ತರುತ್ತಿದ್ದೀರಾ: ಮಾಜಿ ಸಚಿವ ಬಿ.ಸಿ. ನಾಗೇಶ್

Update: 2023-08-22 06:27 GMT

ಬೆಂಗಳೂರು, ಆ. 22: ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ರದ್ದುಗೊಳಿಸುತ್ತೇವೆ ಎಂಬ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಮಾಜಿ ಸಚಿವ ಬಿ.ಸಿ. ನಾಗೇಶ್ ಅವರು ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ.

, ಸಿಬಿಎಸ್ಇ ಶಾಲೆಗಳಲ್ಲಿ ಈಗಾಗಲೇ NEP-2020 ಅನುಷ್ಠಾನವಾಗಿದೆ. ಹೀಗಾಗಿ, ಕಾಂಗ್ರೆಸ್ ನಾಯಕರು ಹಾಗೂ ಇನ್ನಿತರ ಬಲಾಡ್ಯ ರಾಜಕಾರಣಿಗಳ ಒಡೆತನದಲ್ಲಿರುವ CBSE ಶಿಕ್ಷಣ ಸಂಸ್ಥೆಗಳಲ್ಲಿನ NEP-2020 ಆಧಾರಿತ CBSE ಪಠ್ಯಕ್ರಮದ ಬದಲು ಉದ್ದೇಶಿತ ರಾಜ್ಯ ಶಿಕ್ಷಣ ನೀತಿ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲಾಗುವುದೇ?

ಎನ್‌ಇಪಿಯಲ್ಲಿ ಆಯಾ ರಾಜ್ಯಗಳ ಭಾಷೆ/ ಮಾತೃ ಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಉನ್ನತ ಶಿಕ್ಷಣದಲ್ಲೂ ಇಂಗ್ಲೀಷೇತರ ಭಾಷೆಯಲ್ಲಿ ಕಲಿತು ಪದವಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಎನ್‌ಇಪಿಯಲ್ಲಿ ಈ ರೀತಿ ವೈವಿಧ್ಯಮಯ ಕಲಿಕೆಗೆ ಅವಕಾಶ ಕಲ್ಪಿಸಿರುವುದರಿಂದ ತಮ್ಮ ಒಡೆತನದ ಶಿಕ್ಷಣ ಸಂಸ್ಥೆಗಳಲ್ಲಿ ನೀಡುತ್ತಿರುವ ಇಂಗ್ಲೀಷ್ ಶಿಕ್ಷಣಕ್ಕೆ ಧಕ್ಕೆಯಾಗುತ್ತದೆ ಎಂಬ ಭಯ ಕಾಡುತ್ತಿದೆಯೇ?

ವಿಜ್ಞಾನಿಗಳು, ಶಿಕ್ಷಣ ತಜ್ಞರು, ಮಕ್ಕಳ ತಜ್ಞರು, ಶಿಕ್ಷಕ ಸಮುದಾಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚಿಸಿ ಹತ್ತು ವರ್ಷ ಕಾಲ ಅಧ್ಯಯನ ನಡೆಸಿ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020 ರದ್ದುಗೊಳಿಸಲು ಕಾರಣವೇನು? ಅದರಲ್ಲಿರುವ ಲೋಪ - ದೋಷಗಳು ಏನು ಎಂಬುದನ್ನು ಅಧಿಕೃತ ದಾಖಲೆಗಳ ಮೂಲಕ ರಾಜ್ಯದ ಜನರಿಗೆ ತಿಳಿಸುವಿರಾ?

ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಎನ್ಇಪಿ ರೂಪಿಸಲಾಗಿದೆ ಎಂಬ ತಮ್ಮ ಹೇಳಿಕೆಯು ಅತ್ಯಂತ ಬೇಜವಾಬ್ದಾರಿಯುತ ಹಾಗೂ ರಾಜಕೀಯ ಪ್ರೇರಿತ ಹೇಳಿಕೆಯಾಗಿದೆ. ಅಸಲಿಗೆ ರಾಜ್ಯದ DSERT, ಅನೇಕ ಶಿಕ್ಷಣ ತಜ್ಞರು, ಕುಲಪತಿಗಳು, ಪಾಲಕರು, ಮಕ್ಕಳ ವೈದ್ಯರು, ತಜ್ಞರಿಂದ ಅಭಿಪ್ರಾಯವನ್ನು ಸಂಗ್ರಹಿಸಿ ಸುಧೀರ್ಘ ಸಮಾಲೋಚನೆ ನಡೆಸಿ ಎನ್‌ಇಪಿಯನ್ನು ರೂಪಿಸಲಾಗಿದೆ ಎಂಬುದನ್ನು ನಾನು ಸಾಬೀತುಪಡಿಸುತ್ತೇನೆ. ಸವಾಲು ಸ್ವೀಕರಿಸುವಿರಾ?

ಬಡವ, ಶ್ರೀಮಂತ ಎನ್ನದೇ ಸರ್ವರಿಗೂ ಕೌಶಲ್ಯ ಆಧಾರಿತ, 'ಸಮಾನ ಗುಣಮಟ್ಟ'ದ ಶಿಕ್ಷಣ ನೀಡುವ ಅಂಶಗಳನ್ನು NEP-2020 ಒಳಗೊಂಡಿದೆ. ಬಡವರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಬಾರದೇ? ಸಮಾನ ಶಿಕ್ಷಣ ನೀಡಿದರೆ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಬಾಗಿಲು ಹಾಕಬೇಕಾಗಬಹುದು ಎಂಬ ಆತಂಕವೇ?

ಎನ್‌ಇಪಿಯನ್ನು NEP-2020 ಅನ್ನು ‘ನಾಗಪುರ ಶಿಕ್ಷಣ ನೀತಿ’ ಎನ್ನುವ ಉಪ ಮುಖ್ಯಮಂತ್ರಿಗಳು, ರಾಜ್ಯದಲ್ಲಿ SEP ‘ಸೋನಿಯಾ ಶಿಕ್ಷಣ ನೀತಿ’ಯನ್ನು ಜಾರಿಗೆ ತರುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News