‘ಜಲ ಜೀವನ್ ಮಿಷನ್’: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಸಚಿವ ಸಂಪುಟ ಒಪ್ಪಿಗೆ

Update: 2024-02-08 17:54 GMT

ಬೆಂಗಳೂರು: ಜಲ ಜೀವನ್ ಮಿಷನ್ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ದಡ್ಡಿ ಹಾಗೂ ಇತರೆ 81 ಗ್ರಾಮಗಳಿಗೆ ಮತ್ತು ಬೆಳಗಾವಿ ತಾಲೂಕಿನ ಒಂದು ಗ್ರಾಮಕ್ಕೆ 285 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ‘ಡಿಬಿಒಟಿ’ ಆಧಾರದ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಚ್ಛಾಪುರ ಹಾಗೂ ಇತರೆ 18 ಗ್ರಾಮಗಳಿಗೆ ಹಾಗೂ ಗೋಕಾಕ್ ತಾಲೂಕಿನ ಕುಂದರಗಿ ಹಾಗೂ ಇತರೆ 21 ಗ್ರಾಮಗಳಿಗೆ 92 ಕೋಟಿ ರೂ., ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಮತ್ತು ಇತರೆ 19 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಡಿಒಬಿಟಿ ಆಧಾರದ ಮೇಲೆ 13.83 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಮನುಗನಹಳ್ಳಿ ಮತ್ತು ಇತರೆ 58 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು 49.82 ಕೋಟಿ ರೂ.ಗಳಲ್ಲಿ, ಕಲಬುರಗಿ ಜಿಲ್ಲೆಯ ಕಲಬುರಗಿ ತಾಲೂಕಿನ ಫರಹತಾಬಾದ್ ಮತ್ತು ಇತರೆ 21 ಜನವಸತಿಗಳೊಂದಿಗೆ 2 ಮಾರ್ಗ ಮಧ್ಯದ ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಡಿಒಬಿಡಿ ಆಧಾರದ ಮೇಲೆ 85 ಕೋಟಿ ರೂ.ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಲ್ವಾರ್ ಮತ್ತು ಇತರೆ 20 ಗ್ರಾಮಗಳಿಗೆ 79 ಕೋಟಿ ರೂ.ಗಳಲ್ಲಿ, ಜೇವರ್ಗಿ ತಾಲೂಕಿನ ಕುಡಿ ಮತ್ತು ಇತರೆ 11 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು 27 ಕೋಟಿ ರೂ.ಗಳಲ್ಲಿ, ಆಳಂದ ತಾಲೂಕಿನ ಕೊರಳ್ಳಿ ಮತ್ತು ಇತರೆ 5 ಗ್ರಾಮಗಳಿಗೆ 36 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News