ಕಲಬುರಗಿ: ಧಾರಾಕಾರ ಮಳೆಗೆ ಪೊಲೀಸ್ ಠಾಣೆ ಸಂಪೂರ್ಣ ಜಲಾವೃತ
Update: 2023-09-04 13:04 GMT
ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಧಾರಕಾರ ಮಳೆಗೆ ಇಲ್ಲಿನ ಸೇಡಂ ತಾಲೂಕಿನ ಪೊಲೀಸ್ ಠಾಣೆ ಸಂಪೂರ್ಣ ಜಲಾವೃತಗೊಂಡಿರುವ ಘಟನೆ ಸೋಮವಾರ ವರದಿಯಾಗಿದೆ.
ಸೇಡಂ ಪಟ್ಟಣದ ಎಸಿ ಕಚೇರಿಯ ಹತ್ತಿರದ ಸೇಡಂ ಪೊಲೀಸ್ ಠಾಣೆ ತೆಗ್ಗು ಪ್ರದೇಶದಲ್ಲಿ ಇರುವುದರಿಂದ ಈ ಅವಘಡಕ್ಕೆ ಸಾಕ್ಷಿಯಾಗಿದೆ.
ಮೂರು ದಿನಗಳಿಂದ ರಾತ್ರಿ ಹಗಲು ಸತತ ಮಳೆಗೆ ಸೋಮವಾರ ಪೋಲಿಸ್ ಠಾಣೆ ಸಂಪೂರ್ಣ ಜಲಾವೃತಗೊಂಡಿದ್ದು. ಮೂರು ದಿನಗಳಿಂದ ರಾತ್ರಿ ಹಗಲು ಸತತ ಮಳೆಯಿಂದ ಪೋಲಿಸ್ ಸಿಬ್ಬಂದಿಗಳು ಇಡಿ ರಾತ್ರಿ ಪೋಲಿಸ್ ಠಾಣೆಯಲ್ಲಿ ಜಾಗರಣೆ ಮಾಡಿ. ದಾಖಲಾತಿಗಳನ್ನು ಟೇಬಲ್ ಮೇಲೆ ಇಟ್ಟು ಹಾಳಾಗದಂತೆ ಸಿಬ್ಬಂದಿಗಳು ಎಚ್ಚರವಹಿಸಿದ್ದಾರೆ.
ಮಳೆ ನೀರು ಹರಿದುಕೊಂಡು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಮಸ್ಯೆ ಉಂಟಾಗಿದ್ದು, ಇದೀಗ ನೀರನ್ನು ಹೊರಹಾಕಲು ಪೊಲೀಸರು ಪರದಾಡುತ್ತಿದ್ದಾರೆ.