ಕಲಬುರಗಿ: ಶಾಸಕ ಬಿ.ಆರ್.ಪಾಟೀಲ್ ಆಪ್ತನ ಮಗನ ಹತ್ಯೆ

Update: 2023-12-24 09:59 GMT

ಕಲಬುರಗಿ: ಆಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ಅವರ ಆಪ್ತ ಬಸವರಾಜ್ ಚೌಲ್ ಅವರ ಮಗನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಅಳಂದ ಸೋಲಾಪುರ ನಡುವಿನ ಜಿಡಗಾ ಹೈವೆ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಚಂದ್ರಶೇಖರ್ ಚೌಲ್ (21) ಕೊಲೆಯಾದ ಯುವಕ. ಗೆಳೆಯರೊಂದಿಗಿನ ಪಾರ್ಟಿಯಲ್ಲಿ  ನಡೆದ ಜಗಳ ವಿಕೋಪಕ್ಕೆ ತಿರುಗಿ ಸ್ನೇಹಿತನೇ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಘಟನಾ ಸ್ಥಳಕ್ಕೆ ಆಳಂದ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News