ಕರ್ನಾಟಕ ಮತ್ತೆ ನಂ.1 ಸ್ಥಾನದತ್ತ ಮರಳುತ್ತಿದೆ: ಸಚಿವ ಡಾ.ಜಿ.ಪರಮೇಶ್ವರ್

Update: 2023-08-20 12:00 GMT

ತುಮಕೂರು.ಆ.20: ರಾಜ್ಯ ಎಸ್.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಕ್ಷೇತ್ರಗಳಲ್ಲಿಯೂ ದೇಶದಲ್ಲಿಯೇ ನಂ.1 ಸ್ಥಾನದಲ್ಲಿತ್ತು.ಕಳೆದ ಐದು ವರ್ಷಗಳಲ್ಲಿ ಅದಕ್ಕೆ ಹಿನ್ನೆಡೆಯಾಗಿದ್ದು,ಈಗ ಪುನಃ ನಂ.1 ಆಗುವ ದಾರಿಗೆ ಮರಳಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ಜಿಲ್ಲಾ ಸಹಕಾರಿ ಸಂಘಗಳವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಬಡವರನ್ನು ಶಕ್ತಿವಂತರನ್ನಾಗಿ ಮಾಡುವುದು ಸರಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸರಕಾರ ಮುಂದಡಿಯಿಟ್ಟಿದೆ ಎಂದರು.

ರಾಜ್ಯದಲ್ಲಿ 1904ರಲ್ಲಿ ಪ್ರೆಡಿಕ್ ನಿಕಲೋಸ್ ಎಂಬ ಬ್ರಿಟಿಷರ ಅಧಿಕಾರಿ ಸಹಕಾರಿ ಕ್ಷೇತ್ರಕ್ಕೆ ಅಡಿಪಾಯ ಹಾಕಿದ. ಆ ನಂತರ ಸಿದ್ದನಗೌಡ ಪಾಟೀಲ್ ಎಂಬುವವರು ಸಹಕಾರಿ ಚಳವಳಿ ಪ್ರಾರಂಭಿಸಿದರು. ಇದರ ಭಾಗವಾಗಿ ಇಂದು ಸಹಕಾರಿ ಕ್ಷೇತ್ರ ಕಾಲಿಡದ ವರ್ಗವೇ ಇಲ್ಲವೆನ್ನಬಹುದು.ರಾಷ್ಟ್ರಿಕೃತ ಬ್ಯಾಂಕುಗಳಿಂದ ರೈತರಿಗೆ ಸಾಲ ಸೌಲಭ್ಯ ದೊರೆಯುವುದು ಕಷ್ಟವಾದಾಗ, ಸಹಕಾರಿ ಕ್ಷೇತ್ರಗಳು ರೈತರಿಗೆ ಎತೇಚ್ಚ ಸಾಲ ಸೌಲಭ್ಯ ನೀಡಿ, ಜನಸಾಮಾನ್ಯರ ಅಭಿವೃದ್ದಿಗೆ ಶ್ರಮಿಸಿದೆ.ಇಂದು ಹುಟ್ಟು ಹಬ್ಬ ಆಚರಿಸುತ್ತಿರುವ ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಅಶಯವೂ ಇದೇ ಆಗಿತ್ತು ಎಂದು ಡಾ.ಜಿ.ಪರಮೇಶ್ವರ್ ನುಡಿದರು.

ಸಹಕಾರಿ ಕ್ಷೇತ್ರದಲ್ಲಿ ಕೆ.ಎನ್.ರಾಜಣ್ಣ ಅವರ ಕೊಡುಗೆ ಆಪಾರವಾಗಿದೆ.ಬಡವರಿಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.ಸಹಕಾರಿ ಸಚಿವರಾಗಿರುವ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಇದನ್ನೊಂದು ಮಾದರಿ ಕ್ಷೇತ್ರವಾಗಿಸ ಲಿದ್ದಾರೆ ಎಂಬ ನಂಬಿಕೆ ನಮಗಿದೆ.ಬೆಂಗಳೂರಿಗೆ ಹತ್ತಿರದಲ್ಲಿರುವ ತುಮಕೂರು ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗೆ ಜಿಲ್ಲೆಯ ಎಲ್ಲಾ ಶಾಸಕರ ಸಹಕಾರ ಅಗತ್ಯವಿದೆ.ಈ ಬಾರಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ.ಹಾಗಾಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸುವಂತೆ ಸರಕಾರದ ಮೇಲೆ ಒತ್ತಡ ತರುವುದಾಗಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ,ಸಹಕಾರಿ ಚಳವಳಿಯ ಉದ್ದೇಶ ಗ್ರಾಮೀಣ ಜನರ ಬದುಕು ಹಸನು ಮಾಡುವುದು.ಅವರಿಗೆ ಶೋಷಣೆ ಮುಕ್ತ ವಾತಾವರಣ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಡುವುದು.ಅದು ತುಮಕೂರು ಜಿಲ್ಲೆಯಲ್ಲಿ ಆಗಿದೆ.ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಮೂಲಕ ಪಕ್ಷ,ಜಾತಿ,ಧರ್ಮ ಯಾವುದನ್ನು ನೋಡದೆ ಸುಮಾರು 800 ಕೋಟಿಗೂ ಹೆಚ್ಚು ವ್ಯವಸಾಯ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗಿದೆ.1904ರ ಸಹಕಾರಿ ಆಂದೋಲನ ಮತ್ತು 1970ರ ಹೈನುಗಾರಿಕಾ ಸಹಕಾರಿ ಸಂಘಗಳ ಸಹಕಾರಿ ಕ್ಷೇತ್ರದಲ್ಲಿಯೇ ಬಹಳ ಮಹತ್ವದ ಮೈಲಿಗಲ್ಲು.ಜಿಲ್ಲೆಯ ಪ್ರತಿಯೊಂದು ಗ್ರಾಮಪಂಚಾಯಿತಿ ಹಂತದಲ್ಲಿಯೂ ಸೊಸೈಟಿಗಳನ್ನು ಸ್ಥಾಪಿಸಬೇಕೆಂಬ ಇಚ್ಚೆಇದೆ. ಮುಂದಿನ ಡಿಸೆಂಬರ್ ಅಂತ್ಯಕ್ಕೆ ಇದನ್ನು ಜಿಲ್ಲೆಯಲ್ಲಿ ಸಾಧಿಸಲಿದ್ದೇವೆ ಎಂದರು.

ಇಂದು ರಾಜಕಾರದಲ್ಲಿ ಪ್ರಾಮಾಣಿಕತೆ ಎಂಬುವವರೇ ಇಲ್ಲವಾಗಿದ್ದಾರೆ.ರಾಜಕಾರಣಿಗಳು ಭ್ರಷ್ಟರಾಗಿದ್ದರೆ ಅದಕ್ಕೆ ಮತದಾ ರರೇ ಕಾರಣ.ಅಭಿವೃದ್ದಿಯನ್ನು ಮಾನದಂಡವಾಗಿ ಪರಿಗಣಿಸದೆ, ಜಾತಿ,ಧರ್ಮಕ್ಕೆ ಎಲ್ಲಿಯವರಗೆ ಮತದಾರ ಬೆಲೆ ನೀಡು ತ್ತಾನೋ ಅಲ್ಲಿಯವರೆಗೆ ರಾಜಕಾರಣಿಗಳು ಶುದ್ದ ಹಸ್ತರಾಗಿರಲು ಸಾಧ್ಯವೇ ಇಲ್ಲ.ಇಂದು ಗಾಂಧೀಜಿಯೇ ಚುನಾವಣೆಗೆ ನಿಂತರೂ ಮೊದಲ ಸಾಲಿನಲ್ಲಿಯೇ ಸೋಲಿಸುತ್ತಾರೆ ನಮ್ಮ ಜನ.ಅಂತಹ ಸ್ಥಿತಿ ಮತದಾರರದ್ದಾಗಿದೆ. ನಾನಂತೂ ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ. ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗುವ ಆಸೆ ಇಟ್ಟುಕೊಂಡಿದ್ದಾರೆ.ಅವರು ಇನ್ನೊಮ್ಮೆ ಸ್ಪರ್ಧಿಸಲಿ,ಅವರು ಮುಖ್ಯಮಂತ್ರಿಯಾಗಲು ನಮ್ಮ ಸಹಕಾರವೂ ಇದೆ. ಒಂದು ವೇಳೆ ಅವಕಾಶ ಸಿಕ್ಕರೆ ಈ ಅವಧಿಯಲ್ಲಿಯೇ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಕೆ.ಎನ್.ರಾಜಣ್ಣ ಅಚ್ಚರಿಯ ಮಾತುಗಳನ್ನಾಡಿದರು.

ನಮ್ಮದು ನುಡಿದಂತೆ ನಡೆಯುವ ಸರಕಾರ.ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸರಕಾರ ನಾಂದಿ ಹಾಡಿದೆ.ಆದರೆ ಸರಕಾರದ ಯೋಜನೆಗಳು ಆನರ್ಹರ ಪಾಲಾಗಬಾರದು.ಅನ್ನಭಾಗ್ಯ ಯೋಜನೆ ಜಾರಿಯ ಹಿಂದೆಯೂ ಒಂದು ಕಾರಣವಿದೆ.ಶಿಕ್ಷಣಕ್ಕೆ ಎಲ್ಲವನ್ನು ತಂದುಕೊಡುವ ಶಕ್ತಿ ಇದೆ.ಅದು ಸಮಾಜಕ್ಕೆ ಆಸ್ತಿಯಾಗುತ್ತದೆ ಎಂದ ಕೆ.ಎನ್.ರಾಜಣ್ಣ, ರಾಜ್ಯದಲ್ಲಿ ನಿರೀಕ್ಷೆಯಂತೆ ಮಳೆಯಾಗಿಲ್ಲ.ರಾಜ್ಯವನ್ನು ಬರಗಾಲ ಪಿಡೀತ ಪ್ರದೇಶವೆಂದು ಘೋಷಿಸಲು ಉಪಸಮಿತಿ ರಚಿಸಲಾಗಿದೆ.ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಸಂಸದ ಜಿ.ಎಸ್.ಬಸವರಾಜು,ಪಿಕಾರ್ಡ್ ಬ್ಯಾಂಕುಗಳ ಅಧ್ಯಕ್ಷ ಹಾಗೂ ತಿಪಟೂರು ಶಾಸಕ ಕೆ.ಷಡಕ್ಷರಿ ಮಾತನಾಡಿ ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಎಸ್.ಜಯಕುಮಾರ್ ವಹಿಸಿದ್ದರು.ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್. ರಾಜಣ್ಣ,ರಾಜ್ಯ ಸರಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಂದ್ರ,ಶಾಸಕರಾದ ಜೋತಿಗಣೇಶ್, ಹೆಚ್.ವಿ. ವೆಂಕಟೇಶ್, ಬಿ.ಸುರೇಶಗೌಡ ಅವರುಗಳನ್ನು ಅಭಿನಂದಿಸಲಾಯಿತು.ವೇದಿಕೆಯಲ್ಲಿ ಶ್ರೀಮತಿ ಶಾಂತಲ ರಾಜಣ್ಣ, ಮೇಯರ್ ಶ್ರೀಮತಿ ಪ್ರಭಾವತಿ,ಕೆ.ಎ.ದೇವರಾಜು,ಬಿ.ಜಿ.ವೆಂಕಟೇಗೌಡ,ತುಮಲ್ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ,ಸಹಕಾರ ಮಹಾಮಂಡ ಲದ ರಾಜ್ಯಾಧ್ಯಕ್ಷ ಗಂಗಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News