ಆನ್‌ಲೈನ್‌ ವಿವಾಹ ನೋಂದಣಿಗೆ ರಾಜ್ಯ ಸರ್ಕಾರದ ಕ್ರಮವನ್ನು ಶ್ಲಾಘಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ

Update: 2024-02-16 10:54 GMT

ಬಿಜೆಪಿ ಸಂಸದ ತೇಜಸ್ವಿ ಸೂರ್ಯ (PTI)

ಬೆಂಗಳೂರು: ರಾಜ್ಯದಲ್ಲಿ ವಿವಾಹಗಳ ಆನ್‌ಲೈನ್‌ ನೋಂದಣಿ ಪ್ರಕ್ರಿಯೆಗೆ ಗುರುವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಸರ್ಕಾರದ ಕ್ರಮವನ್ನು ಶ್ಲಾಘಿಸಿ ಇದೊಂದು ಸ್ವಾಗತಾರ್ಹ ಕ್ರಮ ಎಂದು ಹೇಳಿದ್ದಾರೆ.

“ವಿವಾಹ ನೋಂದಣಿ ಪ್ರಕ್ರಿಯೆಯನ್ನು ಡಿಜಿಟಲ್‌ ಮತ್ತು ನಾಗರಿಕ ಸ್ನೇಹಿಯಾಗಿಸಿ ಹೊಸದಾಗಿ ವಿವಾಹವಾದವರಿಗೆ ಅವರ ಮನೆಗಳಲ್ಲಿಯೇ ಪ್ರಮಾಣಪತ್ರವನ್ನು ಪಡೆಯುವ ಅವಕಾಶ ಒದಗಿಸುವ ಸ್ವಾಗತಾರ್ಹ ಕ್ರಮವನ್ನು ಕೃಷ್ಣ ಬೈರೇ ಗೌಡ ಕೈಗೊಂಡಿದ್ದಾರೆ,” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

“ಪ್ರಮಾಣಪತ್ರಕ್ಕಾಗಿ ಸರ್ಕಾರಿ ಕಚೇರಿಗೆ ಭೇಟಿ ನೀಡುವ ಕಷ್ಟದಿಂದಾಗಿ ಲಕ್ಷಾಂತರ ವಿವಾಹಗಳು ನೋಂದಣಿಯಾಗದೇ ಇರುವ ಸಮಸ್ಯೆಯನ್ನು ನಿವಾರಿಸಲು ಈ ಕ್ರಮ ಸಹಕಾರಿ,” ಎಂದು ತೇಜಸ್ವಿ ಸೂರ್ಯ ಬರೆದಿದ್ದಾರೆ.

ಸರ್ಕಾರದ ಆನ್‌ಲೈನ್‌ ವಿವಾಹ ನೋಂದಣಿ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಬೆಂಗಳೂರಿನ ಮಲ್ಲೇಶ್ವರಂ ಸಬ್‌-ರಿಜಿಸ್ಟ್ರಾರ್‌ ಕಚೇರಿಯಲ್ಲಿ ಗುರುವಾರ ಆರಂಭಿಸಲಾಗಿದೆ. ಈ ಕುರಿತಾದ ವೀಡಿಯೋವನ್ನು ಸಚಿವ ಕೃಷ್ಣ ಬೈರೇಗೌಡ ಹಂಚಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News