ಕೋಲಾರ | ಜಿಲ್ಲಾಸ್ಪತ್ರೆಯಿಂದ ಅಪಹರಣಕ್ಕೀಡಾದ ನವಜಾತ ಶಿಶು ಪತ್ತೆ: ಓರ್ವ ಆರೋಪಿಯ ಬಂಧನ

Update: 2023-10-27 09:57 GMT

ಕೋಲಾರ, ಅ.27: ಕೋಲಾರ ಜಿಲ್ಲಾಸ್ಪತ್ರೆಯಿಂದ ಮೂವರು ಮಹಿಳೆಯರಿಂದ ಅಪಹರಣಕ್ಕೀಡಾದ ನವಜಾತ ಶಿಶುವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅಪಹರಣಕ್ಕೆ ಸಂಬಂಧಿಸಿ ಓರ್ವ ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ.

ಸ್ವಾತಿ ಎಂಬ ಮಹಿಳೆಯನ್ನು ಬಂಧಿಸಿರುವ ಪೊಲೀಸರು ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಮಾಲೂರು ಪಟ್ಟಣದ ಪಟೇಲರ ಬೀದಿ ನಿವಾಸಿ ನಂದಿನಿ ಹಾಗೂ ಪೂವರಸನ್ ಎಂಬ ದಂಪತಿಗೆ ಸೇರಿದ ಆರು ದಿನಗಳ ಶಿಶುವನ್ನು ಗುರುವಾರ 4 ಗಂಟೆ ಸುಮಾರಿಗೆ ಮೂವರು ಮಹಿಳೆಯರು ಆಸ್ಪತ್ರೆಯಿಂದ ಅಪಹರಿಸಿದ್ದರು. ಈ ಬಗ್ಗೆ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣ =ಕಾರ್ಯಾಚರಣೆಗೆ ಇಳಿದ ಪೊಲೀಸರು ಕೋಲಾರ ಗಡಿ, ತಮಿಳುನಾಡಿನ ಬೇರಿಕೆ ಎಂಬಲ್ಲಿ ಮಗುವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮಗುವನ್ನು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News