ಚಂದ್ರನ ಮೇಲೆ ಭೂಮಿ ಖರೀದಿಸಿ ರಾಜ್ಯ ಸರಕಾರಕ್ಕೆ ಗಿಫ್ಟ್ ಕೊಟ್ಟ ವಕೀಲ ಹುಸೇನ್
ಬೆಂಗಳೂರು, ಅ.7: ರಾಜ್ಯ ರಾಜಧಾನಿ ಬೆಂಗಳೂರಿನ ವಕೀಲರೊಬ್ಬರು ಚಂದ್ರನ ಮೇಲೆ ಸುಮಾರು ಒಂದು ಎಕರೆ ಭೂಮಿಯನ್ನು ಖರೀದಿಸಿ ರಾಜ್ಯ ಸರಕಾರಕ್ಕೆ ಉಡುಗೊರೆ ಆಗಿ ನೀಡಿದ್ದಾರೆ.
ಬೆಂಗಳೂರಿನ ಹೈಕೋರ್ಟ್ ವಕೀಲರಾಗಿರುವ ಹುಸೇನ್ ಉವೈಸ್ ಸಾಬೀರ್ ಅವರು, ಚಂದ್ರನ ಮೇಲೆ ಲ್ಯಾಕಸ್ ಫೆಲಿಸಿಟಾಸ್ ಎಂಬ ಸ್ಥಳದಲ್ಲಿ 1 ಎಕರೆ ಭೂಮಿಯನ್ನು ದಿ ಲೂನಾರ್ ರಿಜಿಸ್ಟ್ರೀ ಯಿಂದ ಖರೀದಿಸಿದ್ದಾರೆ. ಇದೀಗ ಈ ಭೂಮಿಯ ದಾಖಲಾತಿಯನ್ನು ರಾಜ್ಯ ಸರಕಾರದ ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲು ಮುಂದಾಗಿದ್ದಾರೆ.
ಈ ಕುರಿತಾಗಿ ಮಾತನಾಡಿದ ಹುಸೇನ್ ಉವೈಸ್ ಸಾಬೀರ್ ಅವರು, ಚಂದ್ರನ ಮೇಲೆ ಒಂದು ತುಂಡು ಭೂಮಿಯನ್ನು ಹೊಂದಿರುವುದು ಆವಿಷ್ಕರಿಸುವ ಮತ್ತು ಅನ್ವೇಷಿಸುವ ಮಾನವೀಯತೆಯ ಮಹತ್ವಾಕಾಂಕ್ಷೆಯನ್ನು ಬೆಂಬಲಿಸುತ್ತದೆ. ಭವಿಷ್ಯದಲ್ಲಿ ಅಂತಾರ್ರಾಷ್ಟ್ರೀಯ ಒಪ್ಪಂದಗಳು ಚಂದ್ರನ ಮೇಲಿನ ಆಸ್ತಿ ಹಕ್ಕುಗಳನ್ನು ಹೇಗೆ ಪರಿವರ್ತಿಸಲಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ ಎಂದು ಹೇಳಿದರು.
ಖರ್ಚು ಎಷ್ಟು?: ಚಂದ್ರ ಮೇಲೆ ಭೂಮಿ ಆಯ್ಕೆ ಮಾಡಿದ ನಂತರ, ಸೆಟ್ ದಾಖಲೆಗಳನ್ನು ಒದಗಿಸಬಹುದು ಮತ್ತು ಖರೀದಿಯನ್ನು ಮಾಡಬಹುದು. ಚಂದ್ರನ ಮೇಲೆ ಒಂದು ಎಕರೆ ಭೂಮಿಗೆ ನೂರಾರು ಡಾಲರ್ ವೆಚ್ಚವಾಗುತ್ತದೆ. ಇದರರ್ಥ ನೀವು 2 ಬೆಡ್ರೂಮ್ ಅಪಾರ್ಟ್ಮೆಂಟ್ ನಷ್ಟು ದೊಡ್ಡ ಭೂಮಿಯನ್ನು ಖರೀದಿಸಿದರೆ, ಬೆಲೆ ಸುಮಾರು 35 ಲಕ್ಷ ರೂಪಾಯಿ ಆಗಿರಬಹುದು.
ಎಲ್ಲರೂ ಖರೀದಿಸಬಹುದು
ಲೂನಾರ್ ಸೊಸೈಟಿ ಇಂಟರ್ನ್ಯಾಷನಲ್ ಮತ್ತು ಲೂನಾರ್ ಲ್ಯಾಂಡ್ಸ್ ಕಂಪೆನಿಗಳ ಮೂಲಕ, ಆನ್ಲೈನ್ನಲ್ಲಿ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಬಹುದು. ಇದಕ್ಕಾಗಿ ನೀವು ಅವರ ವೆಬ್ಸೈಟ್ಗೆ ಹೋಗುವ ಮೂಲಕ ನೋಂದಾಯಿಸಿಕೊಳ್ಳಬೇಕು. ನಿರ್ದಿಷ್ಟ ಮೊತ್ತ ಪಾವತಿಸಿ ಭೂಮಿ ಖರೀದಿಸಬಹುದು. ಭಾರತೀಯರು ಕೂಡ ಇದೇ ಪ್ರಕ್ರಿಯೆಯ ಮೂಲಕ ಚಂದ್ರನ ಮೇಲೆ ಭೂಮಿಯನ್ನು ಖರೀದಿಸುತ್ತಿದ್ದಾರೆ.