ರಾಹುಲ್ ಗಾಂಧಿಯವರಿಗೆ ವಿಪಕ್ಷ ನಾಯಕನ ಸ್ಥಾನ ದೇಶದ ಹಿತದೃಷ್ಟಿಯಿಂದ ಒಳ್ಳೆಯದು : ಸಿಎಂ ಸಿದ್ದರಾಮಯ್ಯ

Update: 2024-06-26 07:54 GMT

ಬೆಂಗಳೂರು: ರಾಹುಲ್ ಗಾಂಧಿಯವರು ವಿಪಕ್ಷ ನಾಯಕ ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಹುಲ್ ಗಾಂಧಿಯವರು ಲೋಕಸಭಾ ವಿರೋಧ ಪಕ್ಷದ ಸ್ಥಾನವನ್ನು ಸ್ವೀಕರಿಸಬೇಕೆಂದು ನಾನು ಕೂಡ ಸಲಹೆ ನೀಡಿದ್ದೆ. ಬಿಜೆಪಿ ಹಾಗೂ ನರೇಂದ್ರ ಮೋದಿ ಯವರನ್ನು ಎದುರಿಸಬೇಕಾದರೆ ನೀವೇ ವಿರೋಧಪಕ್ಷದ ನಾಯಕರಾಗಬೇಕೆಂದು ಕಾರ್ಯಕಾರಿಣಿ ಸಮಿತಿ ಹಾಗೂ ನಾನೂ ಒತ್ತಾಯ ಮಾಡಿದ್ದೆ. ರಾಹುಲ್ ಗಾಂಧಿಯವರು ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು. ನಾನು ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ" ಎಂದು ತಿಳಿಸಿದರು.

ಹಾಲಿನ ಉತ್ಪಾದನೆ 99 ಲಕ್ಷಕ್ಕಿಂತ ಹೆಚ್ಚಾಗಿದೆ:

ಹಾಲಿನ ದರ ಹೆಚ್ಚಾಗಿಲ್ಲ. ಕಳೆದ ವರ್ಷ ಇದೇ ವೇಳೆಗೆ ಹಾಲಿನ ಉತ್ಪಾದನೆ 90 ಲಕ್ಷ ಲೀಟರ್ ಇತ್ತು. ಈಗ 99 ಲಕ್ಷಕ್ಕಿಂತ ಹೆಚ್ಚಾಗಿದೆ. ರೈತರಿಂದ ನಾವು ಹಾಲು ಪಡೆಯಬೇಕಾಗಿದ್ದು, ಅದನ್ನು ಮಾರಾಟ ಮಾಡಬೇಕಿದೆ. ಅರ್ಧ ಲೀಟರ್ ಪ್ಯಾಕೆಟ್ ನಲ್ಲಿ 50 ಮೀ.ಲೀ ಹೆಚ್ಚು ಮಾಡಿದ್ದು, ಅದಕ್ಕೆ ತಗುಲುವ 2.10 ರೂ.ಗಳನ್ನು ಪ್ರಮಾಣಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಲಾಗಿದೆ ಎಂದು ಪುನರುಚ್ಚರಿಸಿದರು. ಹಾಲಿನ ಬೆಲೆ ಹೆಚ್ಚು ಮಾಡಿಲ್ಲ. ಹಾಲು ಹೆಚ್ಚು ಉತ್ಪಾದನೆಯಾಗಿರುವುದನ್ನು ಹೆಚ್ಚು ನೀಡಿ ಅದಕ್ಕೆ ತಕ್ಕದರವನ್ನಷ್ಟೇ ನಿಗದಿ ಮಾಡಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News