ಲೋಕಸಭಾ ಚುನಾವಣೆ | ರಾಜ್ಯದ 25 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಬಿಎಸ್ಪಿ

Update: 2024-03-15 12:57 GMT

ಬೆಂಗಳೂರು: ಲೋಕಸಭಾ ಚುನಾವಣೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಬಹುಜನ ಸಮಾಜ ಪಾರ್ಟಿ ಪಕ್ಷವೂ ರಾಜ್ಯದ 25 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

ನಗರದ ಬಿಎಸ್ಪಿ ಪಕ್ಷದ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದರು.

ಬಾಗಲಕೋಟೆ-ವೈ.ಸಿ.ಕಾಂಬಳೆ, ಬೆಂಗಳೂರು ಕೇಂದ್ರ-ಸತೀಶ್ ಚಂದ್ರ ಎಂ., ಬೆಂಗಳೂರು ಉತ್ತರ-ಚಿಕ್ಕಣ್ಣ, ಬೆಂಗಳೂರು ಗ್ರಾಮಾಂತರ-ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ, ಬೆಂಗಳೂರು ದಕ್ಷಿಣ-ಮಣ್ಣೂರ್ ನಾಗರಾಜು, ಬೆಳಗಾವಿ-ಯಮನಪ್ಪ ತಳವಾರ, ಬಳ್ಳಾರಿ-ಶಕುಂತಲಾ, ಬೀದರ್-ಪುಟ್ಟರಾಜು ಎಚ್.

ಬಿಜಾಪುರ-ಕಲ್ಲಪ್ಪ.ಆರ್.ತೊರವಿ, ಚಾಮರಾಜನಗರ-ಸಿ.ಮಹದೇವಯ್ಯ, ಚಿಕ್ಕಬಳ್ಳಾಪುರ- ಆರ್.ಮುನಿಯಪ್ಪ, ಚಿತ್ರದುರ್ಗ-ಅಶೋಕ್ ಚಕ್ರವರ್ತಿ, ದಕ್ಷಿಣ ಕನ್ನಡ-ಕಾಂತಪ್ಪ ಅಳಂಗಾರ್, ದಾವಣಗೆರೆ-ಮಲ್ಲೇಶ್.ಎಚ್, ಧಾರವಾಡ-ಶೋಭಾ ಬಳ್ಳಾರಿ, ಕಲಬುರಗಿ-ಹುಚ್ಚಪ್ಪ ವಟಾರ, ಹಾಸನ- ಗಂಗಾಧರ್ ಬಹುಜನ್, ಹಾವೇರಿ-ಅಶೋಕ್ ಮರಿಯಣ್ಣನವರ್, ಕೋಲಾರ-ಮೈಲಾರಪ್ಪ, ಮಂಡ್ಯ-ಶಿವಶಂಕರ್, ಮೈಸೂರು-ಚಂದ್ರಶೇಖರ್.ಪಿ., ಶಿವಮೊಗ್ಗ-ಎ.ಡಿ.ಶಿವಪ್ಪ, ತುಮಕೂರು-ರಾಜಸಿಂಹ ಜೆ.ಎನ್, ಉಡುಪಿ-ಚಿಕ್ಕಮಗಳೂರು- ಕೆ.ಟಿ.ರಾಧಾಕೃಷ್ಣ ಅವರನ್ನು ಅಧಿಕೃತ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಮುನಿಯಪ್ಪ ಹೇಳಿದ್ದಾರೆ.

ಮೈತ್ರಿ ಇಲ್ಲ: ಈ ವೇಳೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾರಸಂದ್ರ ಮುನಿಯಪ್ಪ, ಬಹುಜನ ಸಮಾಜ ಪಕ್ಷ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕಿ ಮಾಯಾವತಿ ಅವರ ತೀರ್ಮಾನದಂತೆ ಎನ್‍ಡಿಎ ಹಾಗೂ ಇಂಡಿಯಾ ಜತೆ ಮೈತ್ರಿ ಮಾಡಿಕೊಂಡಿಲ್ಲ ಎಂದರು.

ನಾಳೆಯಿಂದಲೇ ಪಕ್ಷದ ವತಿಯಿಂದ ಪ್ರಚಾರ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು. ರಾಜ್ಯದ ಒಂದೆರಡು ಕ್ಷೇತ್ರಗಳಲ್ಲಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ರಾಜ್ಯದ ಮೂರು ನಾಲ್ಕು ವಿಭಾಗಗಳಲ್ಲಿ ಚುನಾವಣಾ ಪ್ರಚಾರ ಕಾರ್ಯನಡೆಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಎಂ.ಗೋಪಿನಾಥ್, ರಾಷ್ಟ್ರೀಯ ಖಚಾಂಚಿ ಡಾ.ಚಿನ್ನಪ್ಪ ಚಿಕ್ಕಹಾಗಡೆ, ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News