ಲೋಕಸಭಾ ಚುನಾವಣೆ | ನಾಳೆ ಕಾಂಗ್ರೆಸ್‌ ಪಟ್ಟಿ ಬಿಡುಗಡೆ, ಸಂಭಾವ್ಯ ಅಭ್ಯರ್ಥಿಗಳು ಯಾರ‍್ಯಾರು?

Update: 2024-03-19 17:20 GMT

ಹೊಸದಿಲ್ಲಿ: ಲೋಕಸಭಾ ಚುನಾವಣೆ ಸಂಬಂಧ ಎಐಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಚುನಾವಣೆ ಸಮಿತಿ ಸಭೆಯಲ್ಲಿ ರಾಜ್ಯದ ಬಹುತೇಕ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.

ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿ ಮತ್ತಿತರು ಭಾಗವಹಿಸಿದ್ದರು.

ಚಿಕ್ಕಬಳ್ಳಾಪುರ, ಬಳ್ಳಾರಿ, ಚಾಮರಾಜನಗರ ಹೊರತುಪಡಿಸಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರಗಳನ್ನು ಅಂತಿಮಗೊಳಿಸಿದೆ ಎಂದು ಹೇಳಲಾಗಿದೆ.

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿವೆ :

►ಬೆಂಗಳೂರು ಉತ್ತರ : ಪ್ರೊ. ರಾಜೀವ್‌ ಗೌಡ

►ಉಡುಪಿ: ಜಯಪ್ರಕಾಶ್‌ ಹೆಗ್ಡೆ

►ಕೊಪ್ಪಳ : ರಾಜಶೇಖರ್ ಹಿಟ್ನಾಳ್

►ಉತ್ತರ ಕನ್ನಡ : ಅಂಜಲಿ ನಿಂಬಾಳ್ಕರ್

►ಬೆಂಗಳೂರು ಕೇಂದ್ರ : ಮನ್ಸೂರ್ ಖಾನ್

►ಬೆಂಗಳೂರು ದಕ್ಷಿಣ : ಸೌಮ್ಯ ರೆಡ್ಡಿ

►ಚಿತ್ರದುರ್ಗ : ಚಂದ್ರಪ್ಪ

►ಕೋಲಾರ : ಎಲ್‌ ಹನುಮಂತಯ್ಯ

►ಬೆಳಗಾವಿ : ಮೃಣಾಳ್‌ ಹೆಬ್ಬಾಳ್ಕರ್

►ಬಾಗಲಕೋಟೆ : ಸಂಯುಕ್ತಾ ಪಾಟೀಲ್

►ಚಿಕ್ಕೋಡಿ : ಪ್ರಿಯಾಂಕಾ ಜಾರಕಿಹೊಳಿ

►ಹುಬ್ಬಳ್ಳಿ-ಧಾರವಾಡ : ವಿನೋದ್‌ ಅಸೂಟಿ

►ದಾವಣಗೆರೆ : ಪ್ರಭಾ ಮಲ್ಲಿಕಾರ್ಜುನ್

►ಕಲಬುರಗಿ : ರಾಧಾಕೃಷ್ಣ ದೊಡ್ಮನಿ

►ದಕ್ಷಿಣ ಕನ್ನಡ : ಪದ್ಮರಾಜ್

►ಬೀದರ್ : ರಾಜಶೇಖರ್ ಪಾಟೀಲ್/ ಸಾಗರ್‌ ಖಂಡ್ರೆ

►ರಾಯಚೂರು : ಕುಮಾರ್‌ ನಾಯ್ಕ್

►ಮೈಸೂರು : ಎಂ.ಲಕ್ಷ್ಮಣ್

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News