ಕೋಲಾರ: ಲ್ಯಾಂಡ್ ಆರ್ಮಿ ಎ .ಇ ಕೋದಂಡರಾಮಯ್ಯ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
Update: 2023-06-28 06:26 GMT
ಕೋಲಾರ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಲ್ಯಾಂಡ್ ಆರ್ಮಿ ಯಲ್ಲಿ AE ಆಗಿ ಕಾರ್ಯನಿರ್ವಹಿಸುತ್ತಿರುವ ಕೋದಂಡರಾಮಯ್ಯ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಕೋದಂಡರಾಮಯ್ಯ ಅವರ ಕುವೆಂಪು ನಗರದ ಪೂಜ ನಿಲಯ ಮನೆ ಮೇಲೆ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಲೋಕಾಯುಕ್ತ SP ಉಮೇಶ್ ನೇತೃತ್ವದಲ್ಲಿ 10 ಜನ ತಂಡದಿಂದ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಮನೆ, ಕಾಂಪ್ಲೆಕ್ಸ್, ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಸಾಗರ ಮನೆ, ತುಮಕೂರಿನ ಕಚೇರಿ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.