ಮಡಿಕೇರಿ: ಸೂಟ್‌ ಕೇಸ್‌ ನಲ್ಲಿ ಮಹಿಳೆಯ ಕೊಳೆತ ಮೃತದೇಹ ಪತ್ತೆ

Update: 2023-09-18 14:37 GMT

ಮಡಿಕೇರಿ ಸೆ.18 : ಕೊಡಗಿನ ಗಡಿಭಾಗ ಪೆರುಂಬಾಡಿ ಚೆಕ್ ಪೋಸ್ಟ್ ವ್ಯಾಪ್ತಿಯ ಕಾಡು ಪ್ರದೇಶದಲ್ಲಿ ಸೂಟ್‌ ಕೇಸ್‌ ವೊಂದರಲ್ಲಿ ಮಹಿಳೆಯ ಕೊಳೆತ ಮೃತದೇಹ ಪತ್ತೆಯಾಗಿರುವುದು ವರದಿಯಾಗಿದೆ. 

ಚೆಕ್ ಪೋಸ್ಟ್ ನಿಂದ 3 ಕಿ.ಮೀ ದೂರದಲ್ಲಿ ವಾಟೆಕೊಲ್ಲಿ ಎಂಬಲ್ಲಿ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News