ಬಿಜೆಪಿಯ ಸಿದ್ಧಾಂತವೂ ನಕಲಿ, ಬಿಜೆಪಿಯವರ ಸದಸ್ಯರೂ ನಕಲಿ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಬಿಜೆಪಿಯ ಸಿದ್ಧಾಂತವೂ ನಕಲಿ, ಬಿಜೆಪಿಯವರ ಮಾತುಗಳೂ ನಕಲಿ, ಬಿಜೆಪಿಯವರ ಸದಸ್ಯರೂ ನಕಲಿ, ಅಸಲಿಯಾಗಿರುವುದು ಬಿಜೆಪಿಯವರ ಬೂಟಾಟಿಕೆ ಮಾತ್ರ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬುಧವಾರ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಮೇಲೆ ತಳುಕು ಒಳಗೆ ಹುಳುಕು’ ಇದು ಬಿಜೆಪಿಯ ಸದಸ್ಯತ್ವ ಅಭಿಯಾನದ ಒನ್ ಲೈನ್ ಸ್ಟೋರಿ. ಏಜನ್ಸಿಗಳ ಮೂಲಕ ನಕಲಿ ಸದಸ್ಯರನ್ನು ಸೇರಿಸಲಾಗುತ್ತಿದೆ. ಈ ಮೂಲಕ ದೊಡ್ಡ ನಾಯಕರಾಗಿ ಬಿಂಬಿಸಿಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಮಧ್ಯಪ್ರದೇಶದ ಶಾಸಕ, ಹಿರಿಯ ಬಿಜೆಪಿ ನಾಯಕ ಅಜಯ್ ವಿಶ್ಣೋಯ್ ಹೇಳಿದ್ದಾರೆ ಎಂದು ಟೀಕಿಸಿದ್ದಾರೆ.
ಕರ್ನಾಟಕ ಬಿಜೆಪಿಯವರು ಸಹ ತಮ್ಮ ಹುದ್ದೆ ಉಳಿಸಿಕೊಳ್ಳಲು ಇದೇ ಮಾರ್ಗ ಅನುಸರಿಸುತ್ತಿದ್ದರೂ ಆಶ್ಚರ್ಯವಿಲ್ಲ ಹೇಳಿದ್ದಾರೆ.
“ಮೇಲೆ ತಳುಕು, ಒಳಗೆ ಹುಳುಕು“ಇದು ಬಿಜೆಪಿಯ ಸದಸ್ಯತ್ವ ಅಭಿಯಾನದ ಒನ್ ಲೈನ್ ಸ್ಟೋರಿ!ಏಜನ್ಸಿಗಳ ಮೂಲಕ ನಕಲಿ ಸದಸ್ಯರನ್ನು ಸೇರಿಸಲಾಗುತ್ತಿದೆ, ಈ ಮೂಲಕ ದೊಡ್ಡ ನಾಯಕರಾಗಿ ಬಿಂಬಿಸಿಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಮಧ್ಯಪ್ರದೇಶದ ಶಾಸಕ, ಹಿರಿಯ ಬಿಜೆಪಿ ನಾಯಕ ಅಜಯ್ ವಿಶ್ಣೋಯ್ ಹೇಳಿದ್ದಾರೆ.@BJP4Karnataka ಪಕ್ಷದವರು ಸಹ…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 16, 2024