ಅತ್ಯಾಚಾರ ಸಂತ್ರಸ್ತ ಬಾಲಕಿಯ ಹೆಸರು, ವಿಳಾಸ ಬಹಿರಂಗಪಡಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Update: 2023-08-05 07:02 GMT

ಬೆಂಗಳೂರು, ಆ.5: ಅತ್ಯಾಚಾರ ಸಂತ್ರಸ್ತೆ 10 ವರ್ಷದ ಶಾಲಾ ಬಾಲಕಿಯೊಬ್ಬಳ ಹೆಸರು, ವಿಳಾಸವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸುವ ಮೂಲಕ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಆರ್. ಪಾಟೀಲ್ ಯತ್ನಾಳ್ ಅವರು ಪೊಕ್ಸೋ ಕಾಯ್ದೆ(POCSO ACT) ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವರ್ತೂರಿನಲ್ಲಿರುವ ಪ್ರತಿಷ್ಠಿತ ಬುದ್ಧಿಮಾಂದ್ಯ ಮಕ್ಕಳ ಶಾಲೆಯೊಂದರಲ್ಲಿ ಆ.3ರಂದು 10 ವರ್ಷದ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿ ಶಾಲಾ ಪ್ರಾಂಶುಪಾಲನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಆ.4ರಂದು ಅಪರಾಹ್ನ 2:09ಕ್ಕೆ ಬಸನಗೌಡ ಆರ್. ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ. 3 ಟ್ವೀಟ್ ಮಾಡಿರುವ ಯತ್ನಾಳ್ ಇದರಲ್ಲಿ ಸಂತ್ರಸ್ತ ಬಾಲಕಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ವರ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ FIR ಪ್ರತಿಯನ್ನು ಕೂಡಾ ಟ್ವೀಟ್ ಜೊತೆ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಸಂತ್ರಸ್ತೆಯ ಹೆಸರು, ತಂದೆ-ತಾಯಿಯ ಹೆಸರು, ವಿಳಾಸ ಬಹಿರಂಗವಾಗಲು ಕಾರಣವಾಗಿದ್ದಾರೆ.

ಪೊಕ್ಸೊ ಕಾಯ್ದೆ ಅಡಿ ಅತ್ಯಾಚಾರ ಸಂತ್ರಸ್ತೆಯ ಹೆಸರು ಬಹಿರಂಗಪಡಿಸುವುದು ಅಪರಾಧವಾಗಿದೆ. ಶಾಸಕನಾಗಿ ಬೇಜವಾಬ್ದಾರಿಯಿಂದ ಎಫ್ ಐಆರ್ ಮತ್ತು ಸಂತ್ರಸ್ತೆ ಹೆಸರು ಬಹಿರಂಗಪಡಿಸಿರುವ ಯತ್ನಾಳ್ ವಿರುದ್ಧ ಕೂಡಲೇ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.


 



Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News