ಮುಡಾ, ಪೊಕ್ಸೊ ಪ್ರಕರಣ: ನಾಳೆ ಹಾಲಿ, ಮಾಜಿ ಸಿಎಂಗಳ ತೀರ್ಪು ಪ್ರಕಟ

Update: 2025-02-06 20:52 IST
ಮುಡಾ, ಪೊಕ್ಸೊ ಪ್ರಕರಣ: ನಾಳೆ ಹಾಲಿ, ಮಾಜಿ ಸಿಎಂಗಳ ತೀರ್ಪು ಪ್ರಕಟ

ಸಿದ್ದರಾಮಯ್ಯ / ಯಡಿಯೂರಪ್ಪ 

  • whatsapp icon

ಬೆಂಗಳೂರು: ಮುಡಾದಲ್ಲಿ ಪತ್ನಿ ಪಾರ್ವತಿಗೆ ಸೈಟ್ ಹಂಚಿಕೆ ಆರೋಪ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಕೋರಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ಶುಕ್ರವಾರ ತೀರ್ಪು ಪ್ರಕಟಿಸಲಿದೆ.

ಸಿಬಿಐ ತನಿಖೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಾದ- ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿತ್ತು. ಶುಕ್ರವಾರ ಬೆಳಗ್ಗೆ 10.30ಕ್ಕೆ ಧಾರವಾಡ ಹೈಕೋರ್ಟ್ ಪೀಠದಲ್ಲಿ ತೀರ್ಪು ಪ್ರಕಟವಾಗಲಿದೆ.

ಇನ್ನೊಂದು ಕಡೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ಆದೇಶವನ್ನ ಸಹ ಇದೇ ಪೀಠ ನೀಡಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News