ಅಧಿವೇಶನ | ಮುಡಾ ಹಗರಣದ ಚರ್ಚೆಗೆ ಪಟ್ಟು : ಅಹೋರಾತ್ರಿ ಧರಣಿಗೆ ಬಿಜೆಪಿ ನಿರ್ಧಾರ

Update: 2024-07-24 12:15 GMT

ಬೆಂಗಳೂರು : ಸದನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿರುವ ಬಿಜೆಪಿಯು ಅಹೋರಾತ್ರಿ ಧರಣಿಗೆ ನಿರ್ಧಾರ ಮಾಡಿದೆ. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು ಹಗರಣದ ತನಿಖೆಗೆ ಪಟ್ಟು ಹಿಡಿದರು.

ಗದ್ದಲದ ಹಿನ್ನೆಲೆಯಲ್ಲಿ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು. ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಇಂದಿನಿಂದ ರಾತ್ರಿಯಿಡೀ ಧರಣಿ ನಡೆಸುವುದಾಗಿ ಘೋಷಣೆ ಮಾಡಿದರು.

ದಲಿತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಸಿಎಂ ಕುಟುಂಬಕ್ಕೆ ನೀಡಿದ ಸೈಟ್ ವಾಪಸ್ ಪಡೆಯಬೇಕು. ಸುಮಾರು ಐದು ಸಾವಿರ ನಿವೇಶನಗಳನ್ನು ಮನಬಂದಂತೆ ಹಂಚಲಾಗಿದೆ. ಅದು ಕೂಡಾ ವಾಪಸ್ ಬರಬೇಕು. ಈ ಹಿನ್ನೆಲೆಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News