ʼನನ್ನ ತೆರಿಗೆ ನನ್ನ ಹಕ್ಕುʼ | ಕರ್ನಾಟಕ ಸರಕಾರದಿಂದ ನಾಳೆ(ಫೆ.7) ಜಂತರ್ ಮಂತರ್ ನಲ್ಲಿ ಪ್ರತಿಭಟನೆ ; ದಿಲ್ಲಿ ಪೊಲೀಸರಿಂದ ಅರ್ಧ ಗಂಟೆ ಅನುಮತಿ

Update: 2024-02-06 16:52 GMT

Photo: X/@siddaramaiah

ಹೊಸದಿಲ್ಲಿ : ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿರುವ ರಾಜ್ಯ ಕಾಂಗ್ರೆಸ್‌ ಸರಕಾರ, ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಎಂಬ ಘೋಷವಾಕ್ಯದೊಂದಿಗೆ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ಆದರೆ, ಜಂತರ್ ಮಂತರ್ನಲ್ಲಿ ಕರ್ನಾಟಕ ಸರಕಾರದ ಪ್ರತಿಭಟನೆಗೆ ದಿಲ್ಲಿ ಪೊಲೀಸ್ ಕೇವಲ ಅರ್ಧ ಗಂಟೆ ಅವಕಾಶ ನೀಡಿದೆ ಎನ್ನಲಾಗಿದೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್ ಶಾಸಕರು, ಸಚಿವರು ದಿಲ್ಲಿಗೆ ತಲುಪಿದ್ದಾರೆ. ನಾಳೆ (ಫೆ.7) ಬೆಳಗ್ಗೆ 11 ಗಂಟೆಯಿಂದ ಜಂತರ್ ಮಂತರ್ ಪ್ರತಿಭಟನೆ ಮಾಡಲು ಸಮಯ ನಿಗದಿಯಾಗಿತ್ತು. ಆದರೆ ದಿಲ್ಲಿ ಪೊಲೀಸರು, ನಾಳೆ ಮಧ್ಯಾಹ್ನ 12.30ರಿಂದ 1ರವರೆಗೆ ಮಾತ್ರ ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ ಸುದ್ದಿಗೋಷ್ಠಿ ನಡೆಸಿ ಅಂಕಿ ಅಂಶಗಳ ಸಹಿತ ಕೇಂದ್ರ ಅನ್ಯಾಯದ ಕುರಿತು ಆರೋಪಿಸಿದ್ದ ಸಿಎಂ, ಇಂದು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಬಿಜೆಪಿ ಸಂಸದರು ಪ್ರತಿಭಟನೆ ಬರಬೇಕು ಎಂದು ಎಲ್ಲಾ ಸಂಸದರಿಗೂ ಪತ್ರ ಬರೆದು ಪ್ರತಿಭಟನೆಗೆ ಆಹ್ವಾನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News