ಮೈಸೂರು ದಸರಾ: ಅರಮನೆಗೆ ಆಗಮಿಸಿದ ಗಜಪಡೆಯ ಎರಡನೇ ತಂಡ

Update: 2023-09-25 17:31 GMT

ಮೈಸೂರು,ಸೆ.25: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಗಜಪಡೆಯ ಎರಡನೇ ತಂಡ ಸೋಮವಾರ ಮಧ್ಯಾಹ್ನ ಅರಮನೆ ಪ್ರವೇಶಿಸಿದವು.

ಪ್ರಶಾಂತ, ಸುಗ್ರೀವ, ರೋಹಿತ್, ಹಿರಣ್ಯಾ ಹಾಗೂ ಲಕ್ಷ್ಮೀ ಎರಡನೇ ತಂಡದಲ್ಲಿ ಆಗಮಿಸಿದವು. ಆನೆಗಳನ್ನು ಅರಣ್ಯ ಇಲಾಖೆ ಮತ್ತು ಅರಮನೆ ಮಂಡಳಿ ಸ್ವಾಗತಿಸಿಕೊಂಡವು.

ಈಗಾಗಲೇ ಮೊದಲ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಅರ್ಜುನ, ಕಂಜನ್, ವರಲಕ್ಷ್ಮೀ, ವಿಜಯ, ಭೀಮ, ಗೋಪಿ, ಧನಂಜಯ, ಮಹೇಂದ್ರ ಆನೆಗಳ ತಂಡ ಮೈಸೂರಿಗೆ ಆಗಮಿಸಿ ಅರಮನೆ ಆರವರಣದಲ್ಲಿ ಠಿಕಾಣಿ ಹೂಡಿದ್ದವು.

ಆನೆಗಳ ಪರಿಚಯ:

ಲಕ್ಷ್ಮೀ: ದೊಡ್ಡ ಹರವೆ ಶಿಬಿರದ ಲಕ್ಷ್ಮೀಗೆ 52 ವರ್ಷ. 2.52 ಎತ್ತರ, 3000-3200 ಕೆ.ಜಿ.ತೂಕ ಇದೆ. ಈ ಆನೆಯ ಮಾವುತ-ರವಿ, ಕಾವಾಡಿ-ಮಂಜು, ರೋಹಿತ:

ಈ ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿರುವ ಗಜಪಡೆಯಲ್ಲಿ ಅತೀ ಚಿಕ್ಕ ವಯಸ್ಸಿನ ಆನೆ ರೋಹಿತ, ರಾಮಪುರ ಶಿಬಿರದ ಈ ಆನೆಗೆ 21 ವರ್ಷ, 2.70 ಮೀ.ಎತ್ತರ, 2900-3000 ತೂಕ ಇದೆ.

ಇದು ಕೂಡ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದೆ. ಮಾವುತ-ಮಹದೇವ, ಕಾವಾಡಿ-ಮಣಿ,

ಹಿರಾ: ರಾಮಪುರ ಶಿಬಿರದ ಹೆಣ್ಣಾನೆ ಹಿರಣ್ಯಾಗ 46 ವರ್ಷ. 2.50 ಮೀ. ಎತ್ತರ, 3000-3200 ಕೆ.ಜಿ.ತೂಕ ಇದೆ. ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದೆ. ಮಾವುತ-ಚಂದ್ರಶೇಖರ್, ಕಾವಾಡಿ-ಮನ್ಸೂರ್‌,

ಪ್ರಶಾಂತ: ದುಬಾರ ಶಿಬಿರದ ಪ್ರಶಾಂತ ಆನೆಗೆ 50 ವರ್ಷ. 3 ಮೀ. ಎತ್ತರ, 4000-4200 ಕೆ.ಜಿ.ತೂಕ ಇದೆ. ಮಾವುತ-ಚಿನ್ನಪ್ಪ, ಕಾವಾಡಿ-ಚಂದ್ರ,

ಸುಗ್ರೀವ: ದುಬಾರೆ ಶಿಬಿರದ ಸುಗ್ರೀವ ಆನೆಗೆ 41 ವರ್ಷ, 2.77 ಮೀ. ಎತ್ತರ, 4000-4100 ಕೆ.ಜಿ.ತೂಕ ಇದೆ, ಮಾವುತ-ಜೆ.ಬಿ.ಶಂಕರ್, ಕಾವಾಡಿ-ಜೆ.ಬಿ.ಹರೀಶ್.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News