ಬಿಟ್ ಕಾಯಿನ್ ಹೆಸರಿನಲ್ಲಿ ವಂಚನೆ; 87 ಲಕ್ಷರೂ. ಕಳೆದುಕೊಂಡ ಮೈಸೂರಿನ ಇಬ್ಬರು ನಿವಾಸಿಗಳು

Update: 2023-07-21 06:58 GMT

ಸಾಂದರ್ಭಿಕ ಚಿತ್ರ

ಮೈಸೂರು, ಜು.21: ಬಿಟ್ ಕಾಯಿನ್ ಮೂಲಕ ಲಕ್ಷ ಲಕ್ಷ ಹಣ ಸಂಪಾದಿಸಲು ಹೋಗಿ ಮೈಸೂರಿನ ಇಬ್ಬರು ನಿವಾಸಿಗಳು 87 ಲಕ್ಷ ರೂ. ಕಳೆದುಕೊಂಡಿರುವ ಘಟನೆ ವರದಿಯಾಗಿದೆ.

ಮೈಸೂರಿನ ಮೇಟಗಳ್ಳಿ ನಿವಾಸಿ ವಿಜಯಲಕ್ಷ್ಮೀ 52 ಲಕ್ಷ ರೂ., ಮುಹಮ್ಮದ್ ಜಾವೇದ್ 35 ಲಕ್ಷ ರೂ., ಹಣ ಕಳೆದಕೊಂಡವರು ಎಂದು ತಿಳಿದುಬಂದಿದೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧ್ಯವರ್ತಿಯ ಮಾತಿಗೆ ಮರುಳಾಗಿ ಇಬ್ಬರೂ ಬ್ಯಾಂಕ್ ನಲ್ಲಿ ಸಾಲ ಮಾಡಿ ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.

ಖದೀಮರು ಟೆಲಿಗ್ರಾಂನಲ್ಲಿ ಇನ್ವಿಟೇಷನ್ ಕಳುಹಿಸಿ ಗ್ರೂಪ್ ರಚಿಸಿದ್ದು, ಲಕ್ಷ ಲಕ್ಷ ರೂ. ಲಾಭ ಗಳಿಸಿರುವ ನಕಲಿ ಸ್ಟೀನ್ ಶಾಟ್ ಕಳುಹಿಸಿ ಜನರಿಗೆ ವಂಚನೆ ಮಾಡಿದ್ದಾರೆ. ಬಿಟ್ ಕಾಯಿನ್ ಟ್ರೇಡರ್ಸ್ ಕಾಂಟ್ಯಾಕ್ಟ್ ಕಂಡು ಮೈಸೂರು ಪೊಲೀಸರು ಬೆಚ್ಚಿ ಬಿದಿದ್ದಾರೆ.

ಜಮ್ಮು ಕಾಶ್ಮೀರದ ಶ್ರೀನಗರದಿಂದ ಕೇರಳದವರೆಗೆ ಬಿಟ್ ಕಾಯಿನ್ ದಂಧೆ ನೆಟ್ ವರ್ಕ್ ಇದೆ. ದೇಶದ ವಿವಿಧ ರಾಜ್ಯಗಳಲ್ಲಿ 51 ಅಕೌಂಟ್ ಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ಮೈಸೂರಿನ ಮಹಮ್ಮದ್ ಜಾವೇದ್ ಬಳಿ 35 ಲಕ್ಷ ರೂ.ಯನ್ನು 15 ಅಕೌಂಟ್ ಗೆ ಖದೀಮರು ಹಾಕಿಸಿಕೊಂಡಿದ್ದಾರೆ. ಜೊತೆಗೆ ವಿಜಯಲಕ್ಷ್ಮಿ ಎಂಬವರ 52 ಲಕ್ಷ ರೂ. 36 ಅಕೌಂಟ್ ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಶ್ರೀನಗರದಲ್ಲಿ 2 ಅಕೌಂಟ್, ಕೇರಳ, ಬೆಂಗಳೂರು, ಮಧ್ಯಪ್ರದೇಶ, ಜಾರ್ಖಂಡ್, ಉತ್ತರಪ್ರದೇಶ ಸೇರಿದಂತೆ ವಿವಿಧ ಭಾಗದಲ್ಲಿ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ.

ಬಿಟ್ ಕಾಯಿನ್ ನಲ್ಲಿ ಹಣ ಹೂಡುವ ಮುನ್ನ ಎಚ್ಚರಿಕೆ ವಹಿಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News