2024-25ರ ಐಎಸ್‌ಎಲ್ ಫುಟ್ಬಾಲ್ ಪಂದ್ಯಾವಳಿಗೆ ʼನಂದಿನಿʼ ಪ್ರಾಯೋಜಕತ್ವ!

Update: 2024-09-04 09:41 GMT

   ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್) ಒಡೆತನದ ಜನಪ್ರಿಯ ಡೈರಿ ಬ್ರ್ಯಾಂಡ್ ನಂದಿನಿ 2024-25ರ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಪುಟ್ಬಾಲ್ ಪಂದ್ಯದ ಪ್ರಾಯೋಜಕತ್ವಕ್ಕೆ ಸಜ್ಜಾಗಿದೆ. ಈ ಹೆಜ್ಜೆ ರಾಜ್ಯದ ಹೆಸರಾಂತ ಡೈರಿ ಬ್ರ್ಯಾಂಡ್ ನಂದಿನಿಯನ್ನು ಪ್ರಚಾರ ಮಾಡುವ ಗುರಿಯ ಭಾಗವಾಗಿದೆ ಎಂದು ಹೇಳಲಾಗಿದೆ.

ಇಂಡಿಯನ್ ಸೂಪರ್ ಲೀಗ್ ನ 11ನೇ ಸೀಸನ್ ಸೆ. 2024 ರಿಂದ ಮಾ. 2025ರವರೆಗೆ ನಡೆಯಲಿದ್ದು, ಪಂದ್ಯದಲ್ಲಿ 13 ತಂಡಗಳು ಸ್ಪರ್ಧಿಸಲಿವೆ. ಮನಿ ಕಂಟ್ರೋಲ್‌ನ ವರದಿಯ ಪ್ರಕಾರ, ಪಂದ್ಯಾವಳಿಯ ಉದ್ದಕ್ಕೂ ನಂದಿನಿ ಬ್ರ್ಯಾಂಡ್ನ್ನು ಪ್ರಚಾರ ಮಾಡಲು ಕೆಎಂಎಫ್ ಮುಂದಾಗಿದೆ.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಕೆಎಂಎಫ್ ಐಎಸ್ಎಲ್ ನ ಮುಖ್ಯ ಪ್ರಾಯೋಜಕತ್ವದ ಮೂಲಕ ಪ್ರಚಾರ ಮಾಡುವ ಗುರಿಯನ್ನು ಹೊಂದಿದೆ. ಎಲ್‌ಇಡಿ ಬೋರ್ಡ್‌ಗಳು, ಪ್ರೆಸೆಂಟೇಶನ್ ಬ್ಯಾಕ್‌ಡ್ರಾಪ್‌ಗಳು ಸೇರಿ ವಿವಿಧ ರೀತಿಯಲ್ಲಿ ಪ್ರಾಯೋಜಕತ್ವದ ಗುರಿಯನ್ನು ಹೊಂದಿದೆ. ISL ಪಂದ್ಯದ ಉದ್ದಕ್ಕೂ ಸಾಮಾಜಿಕ ಮಾಧ್ಯಮ ನಿರ್ವಹಣೆಯೊಂದಿಗೆ ದೂರದರ್ಶನ ಮತ್ತು OTT ಪ್ಲಾಟ್‌ಫಾರ್ಮ್‌ಗಳಲ್ಲಿ ನಂದಿನಿ 300 ಸೆಕೆಂಡುಗಳ ಪ್ರಯೋಜಕತ್ವವನ್ನು ಪಡೆದಿದೆ ಎಂದು ಹೇಳಲಾಗಿದೆ.

ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನದಲ್ಲಿ, ನಂದಿನಿಯು ತನ್ನ ಶಕ್ತಿ ಪಾನೀಯವಾದ 'ನಂದಿನಿ ಸ್ಪ್ಲಾಶ್' ಅನ್ನು ಯುಎಸ್ ನಲ್ಲಿ ಬಿಡುಗಡೆ ಮಾಡಿದೆ, ಇದು ವಿಶ್ವಕಪ್ ಸಮಯದಲ್ಲಿ ಲಭ್ಯವಾಗುವಂತೆ ಮಾಡಿದೆ. ಈ ಕ್ರಮವು ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ಸ್ಥಾಪಿಸುವ ವಿಶಾಲ ಕಾರ್ಯತಂತ್ರದ ಭಾಗವಾಗಿದೆ ಎಂದು ಕೆಎಂಫ್ ನಿರ್ದೇಶಕ ತಿಳಿಸಿದ್ದಾರೆ.

ಇದಲ್ಲದೆ ನಂದಿನಿ ತನ್ನ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪ ಸೇರಿದಂತೆ ಡೈರಿ ಉತ್ಪನ್ನಗಳನ್ನು ದೆಹಲಿ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಿದ್ಧವಾಗಿದೆ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.

T20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿತ್ತು. ಇದಲ್ಲದೆ ನಂದಿನಿ ಅಂತರಾಷ್ಟ್ರೀಯ ಕ್ರಿಕೆಟ್ ತಂಡಗಳಿಗೆ ಪ್ರಯೋಜಕತ್ವವನ್ನು ನೀಡುವ ಮೊದಲ ಭಾರತೀಯ ಡೈರಿ ಬ್ರ್ಯಾಂಡ್ ಎಂಬ ಹೆಗ್ಗಳಿಕೆ ಹೊಂದಿದೆ.

ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್) ಒಡೆತನದ ಜನಪ್ರಿಯ ಡೈರಿ ಬ್ರ್ಯಾಂಡ್ ನಂದಿನಿ 2024-25ರ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಪುಟ್ಬಾಲ್ ಪಂದ್ಯದ ಪ್ರಾಯೋಜಕತ್ವಕ್ಕೆ ಸಜ್ಜಾಗಿದೆ. ಈ ಹೆಜ್ಜೆ ರಾಜ್ಯದ ಹೆಸರಾಂತ ಡೈರಿ ಬ್ರ್ಯಾಂಡ್ ನಂದಿನಿಯನ್ನು ಪ್ರಚಾರ ಮಾಡುವ ಗುರಿಯ ಭಾಗವಾಗಿದೆ ಎಂದು ಹೇಳಲಾಗಿದೆ.

ಇಂಡಿಯನ್ ಸೂಪರ್ ಲೀಗ್ನ 11ನೇ ಸೀಸನ್ ಸೆ. 2024 ರಿಂದ ಮಾ. 2025ರವರೆಗೆ ನಡೆಯಲಿದ್ದು, ಪಂದ್ಯದಲ್ಲಿ 13 ತಂಡಗಳು ಸ್ಪರ್ಧಿಸಲಿವೆ. Moneycontrolನ ವರದಿಯ ಪ್ರಕಾರ, ಪಂದ್ಯಾವಳಿಯ ಉದ್ದಕ್ಕೂ ನಂದಿನಿ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ಕೆಎಂಎಫ್ ಮುಂದಾಗಿದೆ.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಕೆಎಂಎಫ್ ಐಎಸ್ಎಲ್ ನ ಮುಖ್ಯ ಪ್ರಾಯೋಜಕತ್ವದ ಮೂಲಕ ಪ್ರಚಾರ ಮಾಡುವ ಗುರಿಯನ್ನು ಹೊಂದಿದೆ. ಎಲ್‌ಇಡಿ ಬೋರ್ಡ್‌ಗಳು, ಪ್ರೆಸೆಂಟೇಶನ್ ಬ್ಯಾಕ್‌ಡ್ರಾಪ್‌ಗಳು ಸೇರಿ ವಿವಿಧ ರೀತಿಯಲ್ಲಿ ಪ್ರಾಯೋಜಕತ್ವದ ಗುರಿಯನ್ನು ಹೊಂದಿದೆ. ISL ಪಂದ್ಯದ ಉದ್ದಕ್ಕೂ ಸಾಮಾಜಿಕ ಮಾಧ್ಯಮ ನಿರ್ವಹಣೆಯೊಂದಿಗೆ ದೂರದರ್ಶನ ಮತ್ತು OTT ಪ್ಲಾಟ್‌ಫಾರ್ಮ್‌ಗಳಲ್ಲಿ ನಂದಿನಿ 300 ಸೆಕೆಂಡುಗಳ ಪ್ರಯೋಜಕತ್ವವನ್ನು ಪಡೆದಿದೆ ಎಂದು ಹೇಳಲಾಗಿದೆ.

ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನದಲ್ಲಿ, ನಂದಿನಿಯು ತನ್ನ ಶಕ್ತಿ ಪಾನೀಯವಾದ 'ನಂದಿನಿ ಸ್ಪ್ಲಾಶ್' ಅನ್ನು ಯುಎಸ್ನಲ್ಲಿ ಬಿಡುಗಡೆ ಮಾಡಿದೆ, ಇದು ವಿಶ್ವಕಪ್ ಸಮಯದಲ್ಲಿ ಲಭ್ಯವಾಗುವಂತೆ ಮಾಡಿದೆ. ಈ ಕ್ರಮವು ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ಸ್ಥಾಪಿಸುವ ವಿಶಾಲ ಕಾರ್ಯತಂತ್ರದ ಭಾಗವಾಗಿದೆ ಎಂದು ಕೆಎಂಫ್ ಎಂಡಿ ತಿಳಿಸಿದ್ದಾರೆ.

ಇದಲ್ಲದೆ ನಂದಿನಿ ತನ್ನ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪ ಸೇರಿದಂತೆ ಡೈರಿ ಉತ್ಪನ್ನಗಳನ್ನು ದಿಲ್ಲಿ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಿದ್ಧವಾಗಿದೆ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.

T20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿತ್ತು. ಇದಲ್ಲದೆ ನಂದಿನಿ ಅಂತರಾಷ್ಟ್ರೀಯ ಕ್ರಿಕೆಟ್ ತಂಡಗಳಿಗೆ ಪ್ರಯೋಜಕತ್ವವನ್ನು ನೀಡುವ ಮೊದಲ ಭಾರತೀಯ ಡೈರಿ ಬ್ರ್ಯಾಂಡ್ ಎಂಬ ಹೆಗ್ಗಳಿಕೆ ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News