ಬಿಎಸ್‌ವೈ ವಿರುದ್ಧದ ಪೊಕ್ಸೋ ಪ್ರಕರಣ | ಬಂಧಿಸದಂತೆ ನೀಡಿದ್ದ ಮಧ್ಯಂತರ ಆದೇಶ ರದ್ದು ಕೋರಿ ಸಿಐಡಿ ಅರ್ಜಿ

Update: 2024-08-22 12:46 GMT

ಬಿ.ಎಸ್.ಯಡಿಯೂರಪ್ಪ(PC : PTI)

ಬೆಂಗಳೂರು : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೊಕ್ಸೋ ಪ್ರಕರಣದಲ್ಲಿ ಬಂಧಿಸದಂತೆ ನೀಡಿದ್ದ ಮಧ್ಯಂತರ ಆದೇಶ ರದ್ದು ಕೋರಿ ಸಿಐಡಿ ಹೈಕೋರ್ಟ್ ಮೊರೆಹೋಗಿದೆ.

ಈ ಕುರಿತು ಯಡಿಯೂರಪ್ಪ ಅವರ ವಿಚಾರಣೆ ನಡೆಸಬೇಕು ಹಾಗಾಗಿ ಮಧ್ಯಂತರ ಆದೇಶ ತೆರವುಗೊಳಿಸಿ ಎಂದು ಕೋರಿ ಸಿಐಡಿ ಪೊಲೀಸರ ಪರ ಎಸ್‌ಪಿಪಿ ಅಶೋಕ್ ನಾಯಕ್ ಅವರು ಹೈಕೊರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸಿಐಡಿ ಅರ್ಜಿ ಸಂಬಂಧ ವಾದ ಮಂಡಿಸಲು ಕಾಲವಕಾಶಕ್ಕಾಗಿ ಕೋರಿ ಯಡಿಯೂರಪ್ಪ ಪರ ವಕೀಲರು ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ. ಜತೆಗೆ ಆರೋಪಿಯನ್ನು ಬಂಧಿಸದಂತೆ ನ್ಯಾಯಪೀಠ ನೀಡಿದ್ದ ಆದೇಶ ವಿಸ್ತರಿಸಿ ಆದೇಶಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News