ಕನ್ನಡ ಪರ ಹೋರಾಟಗಾರರಿಂದ ಸುದ್ದಿಗೋಷ್ಠಿಗೆ ಅಡ್ಡಿ: ಸಿದ್ದಾರ್ಥ್ ಬಳಿ ಕ್ಷಮೆಯಾಚಿಸಿದ ಪ್ರಕಾಶ್‌ ರಾಜ್‌

Update: 2023-09-29 05:38 GMT

ಬೆಂಗಳೂರು: ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಕೆಲವು ಕನ್ನಡ ಪರ ಹೋರಾಟಗಾರರು ತಮಿಳು ನಟ ಸಿದ್ದಾರ್ಥ್‌ಗೆ ತೊಂದರೆ ನೀಡಿರುವ ಬಗ್ಗೆ ನಟ ಪ್ರಕಾಶ್‌ ರಾಜ್‌ ಕ್ಷಮೆಯಾಚಿಸಿದ್ದಾರೆ.

ತಮ್ಮ ಹೊಸ ಚಿತ್ರದ ಪ್ರಚಾರಕ್ಕಾಗಿ ಸಿದ್ದಾರ್ಥ್ ಬೆಂಗಳೂರಿಗೆ ಬಂದಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತು ಆರಂಭಿಸುತ್ತಿದ್ದಂತೆಯೇ ಕನ್ನಡ ಪರ ಸಂಘಟನೆಯ ಸದಸ್ಯರು ವಾಗ್ದಾಳಿ ನಡೆಸಿ ಕಾರ್ಯಕ್ರಮ ನಿಲ್ಲಿಸುವಂತೆ ಒತ್ತಾಯಿಸಿದರು. ಅದಾಗ್ಯೂ, ಸಿದ್ದಾರ್ಥ್ ಮಾಧ್ಯಮಗಳನ್ನು ಉದ್ದೇಶಿಸಿ ಪತ್ರಿಕಾಗೋಷ್ಠಿಯನ್ನು ಪ್ರಾರಂಭಿಸಿದರು.

ಆದರೆ, ಕಾವೇರಿ ಚಳವಳಿಗೆ ಬೆಂಬಲ ವ್ಯಕ್ತಪಡಿಸಲು ಸಿದ್ಧಾರ್ಥ್ ಅವರನ್ನು ಕನ್ನಡ ಪರ ಹೋರಾಟಗಾರರು ಒತ್ತಾಯಿಸಿದ್ದು, ಪರಿಸ್ಥಿತಿ ಉಲ್ಬಣಗೊಂಡಿತು.

ಕೊನೆಗೆ, ಸಿದ್ದಾರ್ಥ್ ಅವರು ಕೈ ಜೋಡಿಸಿ, ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿ ಕಾರ್ಯಕ್ರಮದಿಂದ ನಿರ್ಗಮಿಸಿದರು.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್, “ಹೌದು. ಕಾವೇರಿ ನಮ್ಮದು. ಆದರೆ, ದಶಕಗಳಿಂದ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದ ಎಲ್ಲ ಅಸಮರ್ಥ ರಾಜಕೀಯ ಪಕ್ಷಗಳು, ನಾಯಕರನ್ನು ಪ್ರಶ್ನಿಸದೆ ತರಾಟೆಗೆ ತೆಗೆದುಕೊಳ್ಳದೆ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರದ ಸಂಸದರುನ್ನು ಬಿಟ್ಟು ಅಸಹಾಯಕರಾದ ಜನಸಾಮಾನ್ಯರನ್ನು ಕಲಾವಿದರನ್ನು ಹಿಂಸಿಸುತ್ತಿರುವುದು ತಪ್ಪು. ಕನ್ನಡಿಗನಾಗಿ, ಸಹೃದಯ ಕನ್ನಡಿಗರ ಪರವಾಗಿ ನಾನು ಕ್ಷಮೆಯಾಚಿಸುತ್ತಿದ್ದೇನೆ ಸಿದ್ದಾರ್ಥ್‌” ಎಂದು ಟ್ವೀಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News