ಪ್ರಚೋದನಕಾರಿ ಹೇಳಿಕೆ: ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮಕ್ಕೆ ಒತ್ತಾಯ

Update: 2023-10-06 16:03 GMT

ಹುಣಸೂರು,ಅ.6: ಜನರನ್ನು ಕೆರಳಿಸುವಂತಹ ಹೇಳಿಕೆ ನೀಡುತ್ತಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳಲು ವಕೀಲ ಪುಟ್ಟರಾಜು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಹುಣಸೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಷ ಒಬ್ಬ ರಾಜನಾಗಿದ್ದು, ಮಹಿಷ ದಸರಾ ಆಚರಿಸುತ್ತಿದ್ದೇವಯೇ ಹೊರತು ಬೇರೆಯವರಿಗೆ ನೋವುಂಟು ಮಾಡಲು ಅಲ್ಲ. ನಾವೇನು ಸಂಸದರಂತೆ ಜನರನ್ನು ಎತ್ತಿಕಟ್ಟುತ್ತಿಲ್ಲ. ನಾಲ್ಕು ವರ್ಷಗಳಿಂದ ನಾಪತ್ತೆಯಾಗಿದ್ದ ಸಂಸದರು ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತ ಹೇಳಿಕೆ ನೀಡಿ ಅಶಾಂತಿ ಉಂಟು ಮಾಡಲು ಹೊರಟಿದ್ದಾರೆ ಎಂದರು.

ಸಂಸದರು ಅಭಿವೃದ್ಧಿ ಕಡೆ ಗಮನ ಹರಿಸುವುದನ್ನು ಬಿಟ್ಟು ಮಹಿಷ ದಸರಾ ಹೆಸರಲ್ಲೂ ರಾಜಕೀಯಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರಲ್ಲ. ಆ ಪಕ್ಷದ ಹಿರಿಯರು ಸಂಸದರಿಗೆ ತಿಳಿಹೇಳಬೇಕು. ಮಹಿಷ ದಸರಾ ತಡೆದಲ್ಲಿ ಆಗುವ ಅನಾಹುತಗಳಿಗೆ ಸಂಸದರೇ ನೇರ ಹೊಣೆಗಾರರಾಗಲಿದ್ದಾರೆ ಎಂದು ಹೇಳಿದರು.

ಅಕ್ಟೋಬರ್ 13 ರ ಮಹಿಷ ದಸರಾಕ್ಕೆ ತಾಲ್ಲೂಕಿನಿಂದ 200 ಕ್ಕೂ ಹೆಚ್ಚು ಬೈಕ್ ಗಳನ್ನು 15 ಬಸ್ ಗಳಲ್ಲಿ ಬುದ್ಧನ ಅನುಯಾಯಿಗಳು ತೆರಳುತ್ತಿರುವುದಾಗಿ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಜನರು ಭಾಗವಹಿಸುವಂತೆ ಬಿ.ಎಸ್.ಪಿ. ತಾಲೂಕು ಅಧ್ಯಕ್ಷ ಸೋಮನಹಳ್ಳಿ ಪ್ರಸನ್ನ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಮುಕಲಂಡ ವರದರಾಜು, ಕಾಂತರಾಜು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News