ಪಿಎಸ್ಐ ಪರೀಕ್ಷೆ: ಕೀ ಉತ್ತರ ಪ್ರಕಟಿಸಿದ ಪರೀಕ್ಷಾ ಪ್ರಾಧಿಕಾರ

Update: 2024-01-30 15:26 GMT

ಬೆಂಗಳೂರು: ಪಿಎಸ್‍ಐ ನೇಮಕಾತಿಗೆ ಜ.23ರಂದು ಮರುಪರೀಕ್ಷೆ ನಡೆಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅದರ ಕೀ ಉತ್ತರಗಳನ್ನು ಪ್ರಕಟಿಸಿದೆ. ಈ ಸಂಬಂಧ ಆಕ್ಷೇಪ, ತಕರಾರುಗಳು ಇದ್ದಲ್ಲಿ ಫೆ.5ರೊಳಗೆ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

ಮಂಗಳವಾರ ಪ್ರಕಟಣೆ ಹೊರಡಿಸಿರುವ ಅವರು, ಆಕ್ಷೇಪಣೆಗಳನ್ನು ಪ್ರಾಧಿಕಾರದ ಜಾಲತಾಣವಾದ https://cetonline.karnataka.gov.in/kea/ ನ ಹೋಮ್ ಪೇಜ್‍ನಲ್ಲಿರುವ `Recruitment’ `PSI recruitment(Re-exam) 2023’ ಮೆನು ಮೂಲಕ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಆಕ್ಷೇಪಗಳನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಅರ್ಜಿ ಸಂಖ್ಯೆ, ತಮ್ಮ ಹೆಸರು, ಜನ್ಮದಿನಗಳನ್ನು ನಮೂದಿಸಿ, ಅಗತ್ಯ ದಾಖಲೆ/ಸಮರ್ಥನೆಗಳೊಂದಿಗೆ ಫೆ.5ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು. ಪತ್ರ, ಇ-ಮೇಲ್ ಮೂಲಕ ಕಳುಹಿಸುವಂತಹ ಆಕ್ಷೇಪಗಳನ್ನು ಪುರಸ್ಕರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News