ಖ್ಯಾತ ಪತ್ರಕರ್ತ, ಚಿಂತಕ ವಿ.ಟಿ.ರಾಜಶೇಖರ್ ನಿಧನ ; ಸಿಎಂ ಸಿದ್ದರಾಮಯ್ಯ ಸಂತಾಪ
ಬೆಂಗಳೂರು: ಖ್ಯಾತ ಪತ್ರಕರ್ತ, ಲೇಖಕ, ಚಿಂತಕ ಹಾಗು ದಲಿತ್ ವಾಯ್ಸ್ ನಿಯತಕಾಲಿಕದ ಸ್ಥಾಪಕ ಸಂಪಾದಕ ವಿ.ಟಿ.ರಾಜಶೇಖರ್ ಅವರು ಬುಧವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 93 ವರ್ಷ ವಯಸ್ಸಾಗಿತ್ತು. ಕೆಲವು ವರ್ಷಗಳಿಂದ ಮಂಗಳೂರಿನ ಶಿವಭಾಗ್ ನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದ ಅವರು ಇತ್ತೀಚಿಗೆ ಅಸೌಖ್ಯದಿಂದ ಬಳಲುತ್ತಿದ್ದರು. ವಿ.ಟಿ.ರಾಜಶೇಖರ್ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ X ನಲ್ಲಿ ಫೋಸ್ಟ್ ಮಾಡಿರುವ ಸಿಎಂ, "ಪ್ರಖ್ಯಾತ ಪತ್ರಕರ್ತ, ಪ್ರಖರ ಚಿಂತಕ ಮತ್ತು ಹೋರಾಟಗಾರ ವಿ.ಟಿ.ರಾಜಶೇಖರ್ (93) ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಪತ್ರಿಕಾ ವೃತ್ತಿಯನ್ನು ಒಬ್ಬ ಹೋರಾಟಗಾರನಾಗಿಯೇ ಮುನ್ನಡೆಸಿದ್ದ ರಾಜಶೇಖರ್, ಜಾತಿ ವ್ಯವಸ್ಥೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಸದಾ ಸಿಡಿಯುತ್ತಿದ್ದವರು" ಎಂದಿದ್ದಾರೆ.
"ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ನಂತರ ಅಲ್ಲಿಂದ ಹೊರಬಂದು 1981ರಲ್ಲಿ ದಲಿತ್ ವಾಯ್ಸ್ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಆ ದಿನಗಳಿಂದಲೇ ಪರಿಚಿತರಾಗಿದ್ದ ರಾಜಶೇಖರ್ ಅವರು ಒಬ್ಬ ಹಿರಿಯ ಹಿತೈಷಿಯಾಗಿ ನನಗೆ ಮಾರ್ಗದರ್ಶನ ನೀಡುತ್ತಿದ್ದವರು. ರಾಜಶೇಖರ್ ಅವರ ಸಾವು ಸಮಾಜಕ್ಕೆ ದೊಡ್ಡ ನಷ್ಟ ಮಾತ್ರವಲ್ಲ, ಅವರಂತಹ ಜನಪರ ಚಿಂತಕರ ನಿಧನದಿಂದ ಸೃಷ್ಟಿಯಾಗಿರುವ ನಿರ್ವಾತವನ್ನು ತುಂಬುವುದು ಕೂಡಾ ಕಷ್ಟ. ತಂದೆಯನ್ನು ಕಳೆದುಕೊಂಡ ಅಮ್ನೆಷ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ, ಮಗ ಸಲೀಲ್ ಶೆಟ್ಟಿ, ಕುಟುಂಬ ವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ" ಎಂದು ತಿಳಿಸಿದ್ದಾರೆ.
ಪ್ರಖ್ಯಾತ ಪತ್ರಕರ್ತ, ಪ್ರಖರ ಚಿಂತಕ ಮತ್ತು ಹೋರಾಟಗಾರ ವಿ.ಟಿ.ರಾಜಶೇಖರ್ (93) ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಪತ್ರಿಕಾ ವೃತ್ತಿಯನ್ನು ಒಬ್ಬ ಹೋರಾಟಗಾರನಾಗಿಯೇ ಮುನ್ನಡೆಸಿದ್ದ ರಾಜಶೇಖರ್, ಜಾತಿ ವ್ಯವಸ್ಥೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಸದಾ ಸಿಡಿಯುತ್ತಿದ್ದವರು.
— Siddaramaiah (@siddaramaiah) November 20, 2024
ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಎರಡು ದಶಕಗಳ… pic.twitter.com/83icPWwsen