ʻರಾಮೇಶ್ವರಂ ಕೆಫೆʻ ಸ್ಫೋಟ ಪ್ರಕರಣ | ಶಂಕಿತ ವ್ಯಕ್ತಿಯ ಚಹರೆ ಪತ್ತೆ : ಡಿಸಿಎಂ ಡಿ.ಕೆ ಶಿವಕುಮಾರ್‌

Update: 2024-03-01 17:37 GMT

Photo: X/@anusharavi10

ಬೆಂಗಳೂರು: ರಾಮೇಶ್ವರಂ ಕೆಫೆ ಹೋಟೆಲ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಶಂಕಿತ ವ್ಯಕ್ತಿಯ ಚಹರೆ ಪತ್ತೆಯಾಗಿದ್ದು, ಈತ ಟೈಮ್ ಅಳವಡಿಸಿ ಬಾಂಬ್‌ ಸ್ಫೋಟಿಸಿದ್ದಾನೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಮಾಹಿತಿ ನೀಡಿದ್ದಾರೆ.

ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌, ಗೃಹ ಸಚಿವ ಜಿ. ಪರಮೇಶ್ವರ್‌ ಭೇಟಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಸಿಟಿವಿ ಕ್ಯಾಮರಾದಲ್ಲಿ ಶಂಕಿತ ವ್ಯಕ್ಯಿಯ ಚಹರೆ ಪತ್ತೆಯಾಗಿದೆ. ಶಂಕಿತ ವ್ಯಕ್ತಿಯು 28 ರಿಂದ 30 ವರ್ಷದ ಯುವಕ ಎಂದು ಗೊತ್ತಾಗಿದೆ. ರಾಮೇಶ್ವರ್‌ ಕೆಫೆಗೆ ಬಂದು ರವೆ ಇಡ್ಲಿ ತಿಂದು ತನ್ನ ಬಳಿ ಸ್ಫೋಟಕವಿದ್ದ ಬ್ಯಾಗ್‌ ಅನ್ನು ಇಲ್ಲಿ ಇಟ್ಟು ಹೋಗಿದ್ದಾನೆ. ಟೈಮರ್‌ ಅಳವಡಿಸಿರುವುದರಿಂದ 1 ಗಂಟೆ ಬಳಿಕ ಬಾಂಬ್‌ ಸ್ಫೋಟಕೊಂಡಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿಸಿದರು.

ಘಟನೆಯ ಸಂದರ್ಭ 10 ಜನರಿಗೆ ಗಾಯವಾಗಿದ್ದು, ಪ್ರಾಣಾಪಾಯ ಸಂಭವಿಸಿಲ್ಲ, ಬೆಂಗಳೂರಿನ ಜನರು ಯಾರೂ ಭಯಭೀತರಾಗುವುದು ಬೇಡ. ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News