ಆಂಬುಲೆನ್ಸ್ ಸಿಬ್ಬಂದಿಗೆ ನಿಯಾಮಾನುಸಾರ ಅನುದಾನ ಬಿಡುಗಡೆ : ಆರೋಗ್ಯ ಇಲಾಖೆ

Update: 2024-05-06 16:58 GMT

ಬೆಂಗಳೂರು : ರಾಜ್ಯದಲ್ಲಿ 108-ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಯನ್ನು (ಆಂಬುಲೆನ್ಸ್) ಒದಗಿಸುವ ಸಿಬ್ಬಂದಿಗೆ ನಿಯಾಮಾನುಸಾರ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯು ಸ್ಪಷ್ಟಪಡಿಸಿದೆ.

ಸೋಮವಾರ ಇಲಾಖೆಯು ಪ್ರಕಟನೆ ಹೊರಡಿಸಿದ್ದು, 108-ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಯನ್ನು ಜಿ.ವಿ.ಕೆ-ಇ.ಎಂ.ಆರ್.ಐ ಸಂಸ್ಥೆಯವರೊಂದಿಗೆ 2008ನೆ ಸಾಲಿನಿಂದ ಹತ್ತು ವರ್ಷಗಳ ಅವಧಿಗೆ ಒಡಂಬಡಿಕೆಯನ್ನು ಮಾಡಿಕೊಂಡು ಸೇವಾ ಒದಗಿಸಲಾಗುತ್ತಿದೆ. ಒಡಂಬಡಿಕೆಯ ಅವಧಿಯನಂತರ ಅಗತ್ಯ ಅನುಮೋದನೆಯನ್ನು ಸರಕಾರದಿಂದ ಪಡೆದು ಮುಂದುವರೆಸಿಕೊಂಡು ಬರಲಾಗಿದೆ ಎಂದಿದೆ.

ಆರ್ಥಿಕ ವರ್ಷ 2023-24ನೇ ಸಾಲಿನಲ್ಲಿ 108-ಆರೋಗ್ಯ ಕವಚ ಯೋಜನೆಗೆ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ 210.33 ಕೋಟಿ ರೂ.ಗಳ ಅನುದಾನವನ್ನು ಆಯವ್ಯಯದಲ್ಲಿ ಅನುಮೋದನೆಯಾಗಿದ್ದು, ಅನುದಾನದಲ್ಲಿ ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ನಿಗದಿಯಾದ 162.40 ಕೋಟಿ ರೂ.ಗಳ ಪೂರ್ಣ ಅನುದಾನವನ್ನು ಸೇವಾದಾರರಿಗೆ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದೆ.

ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸಂಸ್ಥೆಯು ತಮ್ಮ ಸಿಬ್ಬಂದಿಗಳಿಗೆ ಬಾಕಿ ವೇತನವನ್ನು ಪಾವತಿಸುವ ಜವಾಬ್ದಾರಿಯಾಗಿರುತ್ತದೆ. ಸಂಸ್ಥೆಯ ಸಿಬ್ಬಂದಿಗಳಾದ ಇ.ಎಂ.ಟಿ (ಶುಶ್ರೂಷಕ/ಕಿ), ಪೈಲೆಟ್ (ವಾಹನಚಾಲಕರು) ನಿಯಮನುಸಾರ ಕಾರ್ಮಿಕ ಇಲಾಖೆಯ ನಿಗದಿಪಡಿಸಿರುವ ಕನಿಷ್ಟ ವೇತನವನ್ನು ಅನುಷ್ಠಾನಗೊಳಿಸಿ, ನಂತರ ಕನಿಷ್ಠ ವೇತನದ ಮೇಲೆ ಶೇ.45ರಷ್ಟು ವೇತನ ಹೆಚ್ಚಳವನ್ನು ಹಾಗೂ ವಲಯ-01 ರನ್ವಯ ಕನಿಷ್ಠಿ ವೇತನವನ್ನು ಎಲ್ಲ ಸಿಬ್ಬಂದಿಗಳಿಗೆ ಹಾಗೂ ಆಡಳಿತ ಸಿಬ್ಬಂದಿಗಳಿಗೆ ಅವೈಜ್ಞಾನಿಕವಾಗಿ ಆಗಸ್ಟ್-2022ನೆ ಸಾಲಿನಿಂದ ಫೆಬ್ರವರಿ-2023ನೆ ಸಾಲಿನವರೆಗೆ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News