50 ಕೋಟಿ ರೂ.ಬೇಡಿಕೆ, ಬೆದರಿಕೆ ಆರೋಪ : ಎಚ್‌ಡಿಕೆ ವಿರುದ್ಧ ಬಲವಂತದ ಕ್ರಮಕ್ಕೆ ಹೈಕೋರ್ಟ್ ಮಧ್ಯಂತರ ತಡೆ
Update: 2024-11-07 07:59 GMT
ಬೆಂಗಳೂರು : 50 ಕೋಟಿ ರೂ.ನೀಡುವಂತೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಪ್ರಕರಣ ರದ್ದು ಕೋರಿ ಎಚ್.ಡಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಉದ್ಯಮಿ ವಿಜಯ್ ಟಾಟಾ ಅ.3ರಂದು ದೂರು ನೀಡಿದಾಗ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದರು. ಆದರೆ ಅದೇ ದಿನ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಎನ್‌ಸಿಆರ್ ನೀಡಿದ ದಿನವೇ ಎಫ್ಐಆರ್ ಮಾಡಿದ್ದು ಏಕೆ ಎಂದು ವಿವರಣೆ ನೀಡುವಂತೆ ಅಮೃತಹಳ್ಳಿ ಠಾಣಾಧಿಕಾರಿಗೆ ಸೂಚಿಸಿರುವ ಹೈಕೋರ್ಟ್ ವಿಚಾರಣೆಯನ್ನು ನ.21ಕ್ಕೆ ಮುಂದೂಡಿದೆ.