ಸಮಾಜವಾದಿ ಮುಖವಾಡದ ಸಿದ್ದರಾಮಯ್ಯ ಮಜಾವಾದಿ: ಜೆಡಿಎಸ್‌

Update: 2024-11-16 06:39 GMT

ಬೆಂಗಳೂರು: ಸಮಾಜವಾದಿ ಮುಖವಾಡದ ಸಿದ್ದರಾಮಯ್ಯ ಮಜಾವಾದಿ  ಎಂದು ಜೆಡಿಎಸ್‌ ಲೇವಡಿ ಮಾಡಿದೆ.

ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌, ಭ್ರಷ್ಟಾಚಾರದಲ್ಲಿ "ಸಿದ್ಧ" ಹಸ್ತರಾದಸಿದ್ದರಾಮಯ್ಯ ಅಹಿಂದ ವೇಷತೊಟ್ಟು ರಾಜ್ಯದ ಜನರಿಗೆ ವಂಚಿಸುತ್ತಲೇ ಇದ್ದಾರೆ. ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲು "ಕೈಲಾಗದ" ಸಿಎಂ ಸಿದ್ದರಾಮಯ್ಯ , ವಿಧಾನಸೌಧದಲ್ಲಿರುವ ಅವರ 323ನೇ ಕೊಠಡಿ ನವೀಕರಣಕ್ಕೆ ಕೋಟಿ ಕೋಟಿ ದುಂದು ವೆಚ್ಚ ಮಾಡಿದ್ದಾರೆ ಎಂದು ಆರೋಪಿಸಿದೆ.

ಸರಳತೆ, ಸಮಾಜವಾದ ಎನ್ನುತ್ತಲೇ ಐಷಾರಾಮಿ ಜೀವನ ನಡೆಸುವುದು ಕಾಂಗ್ರೆಸ್‌ ಪಕ್ಷದ ನಾಯಕರಿಗೆ ಕರಗತವಾಗಿದೆ. 2.5 ಕೋಟಿಗೂ ಹೆಚ್ಚು ದುಂದುವೆಚ್ಚ ಮಾಡಿ ಮುಖ್ಯಮಂತ್ರಿ ಕಚೇರಿಯನ್ನು ಕಾರ್ಪೊರೇಟ್‌ ಶೈಲಿಯಲ್ಲಿ ನವೀಕರಿಸಿ, ಕಾರ್ಪೊರೇಟ್‌ ಸಿಎಂ ಆಗಿ ಬದಲಾಗಿದ್ದಾರೆ ಎಂದು ಕುಟುಕಿದೆ.

ಸಮಾಜವಾದಿ ಎಂದು ಬಿಂಬಿಸಿಕೊಳ್ಳುವ ನಿಮಗೆ ಜನರ ತೆರಿಗೆ ಹಣದಲ್ಲಿ ಇಷ್ಟೊಂದು ಐಷಾರಾಮಿ ನವೀಕರಣ ಬೇಕಿತ್ತಾ ? ಇದಕ್ಕೆ ನಿಮ್ಮ ಆತ್ಮಸಾಕ್ಷಿ ಏನು ಹೇಳುತ್ತದೆ ? ಎಂದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News