ಮೂಲ ಕಾಂಗ್ರೆಸ್ಸಿಗರಿಗೂ ಇಟಲಿ ಮೂಲದ ಕಾಂಗ್ರೆಸ್ಸಿಗರಿಗೂ ಸಾಕಷ್ಟು ವ್ಯತ್ಯಾಸವಿದೆ: ಜೆಡಿಎಸ್
ಬೆಂಗಳೂರು: ದೇಶದಲ್ಲಿ ಮೂಲ ಕಾಂಗ್ರೆಸ್ಸಿಗರಿಗೂ ಹಾಗೂ ಇಟಲಿ ಮೂಲದ ಕಾಂಗ್ರೆಸ್ಸಿಗರಿಗೂ ಸಾಕಷ್ಟು ವ್ಯತ್ಯಾಸವಿದೆ. ಮೂಲ ಕಾಂಗ್ರೆಸ್ಸಿಗರು ವರ್ಣಭೇದ ನೀತಿ ವಿರುದ್ಧ ಹೋರಾಡಿದರು. ಆದರೆ ಈಗ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿರುವ ಇಟಲಿ ಮೂಲದವರು, ಭಾರತೀಯರ ದೇಹದ ಬಣ್ಣದ ಬಗ್ಗೆ ಅಸಹ್ಯಕರ, ಅವಮಾನಕರ ಮಾತುಗಳನ್ನು ಆಡುತ್ತಿದ್ದಾರೆ ಎಂದು ಜೆಡಿಎಸ್ ಕುಟುಕಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ X ನಲ್ಲಿ ಫೋಸ್ಟ್ ಮಾಡಿರುವ ಜೆಡಿಎಸ್, ದಕ್ಷಿಣ ಭಾರತದವರು ಆಫ್ರಿಕನ್ನರಂತೆ, ಈಶಾನ್ಯ ಭಾರತದವರು ಚೈನಾದವರಂತೆ, ಉತ್ತರ ಭಾರತದವರು ಅರಬ್ಬರಂತೆ ಕಾಣಿಸುತ್ತಾರೆ ಎಂದು ರಾಹುಲ್ ಗಾಂಧಿ ಅವರ ಸಲಹೆಗಾರ ಹಾಗೂ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾಗಿರುವ ಸ್ಯಾಮ್ ಪಿತ್ರೋಡಾ ವರ್ಣನಿಂದನೆ ಮಾತಾಡಿದ್ದರು. ಈಗ ಜಮೀರ್ ಅಹಮದ್ ಸರದಿ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಕಾಂಗ್ರೆಸ್ ನಾಯಕರ ಮನಸ್ಥಿತಿ ಬದಲಾಗಿಲ್ಲ. ಇಂತಹ ತಾರತಮ್ಯದ ಹೇಳಿಕೆಗಳನ್ನು ಖಂಡಿಸದೆ ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥಿಸಿಕೊಳ್ಳುತ್ತಿರುವುದು ಲಜ್ಜೆಗೇಡಿತನ ಎಂದು ಟೀಕಿಸಿದೆ.
ದೇಶದಲ್ಲಿ ಮೂಲ ಕಾಂಗ್ರೆಸ್ಸಿಗರಿಗೂ ಹಾಗೂ ಇಟಲಿ ಮೂಲದ ಕಾಂಗ್ರೆಸ್ಸಿಗರಿಗೂ ಸಾಕಷ್ಟು ವ್ಯತ್ಯಾಸವಿದೆ.
— Janata Dal Secular (@JanataDal_S) November 16, 2024
ಮೂಲ ಕಾಂಗ್ರೆಸ್ಸಿಗರು ವರ್ಣಭೇದ ನೀತಿ ವಿರುದ್ಧ ಹೋರಾಡಿದರು.
ಆದರೀಗ @INCIndia ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿರುವ ಇಟಲಿ ಮೂಲದವರು, ಭಾರತೀಯರ ದೇಹದ ಬಣ್ಣದ ಬಗ್ಗೆ ಅಸಹ್ಯಕರ, ಅವಮಾನಕರ ಮಾತುಗಳನ್ನು ಆಡುತ್ತಿದ್ದಾರೆ.…