ರಾಜ್ಯ ಬಜೆಟ್: ವಲಸೆ ಕಾರ್ಮಿಕರಿಗಾಗಿ 10 ಜಿಲ್ಲೆಗಳಲ್ಲಿ ತಾತ್ಕಾಲಿಕ ವಸತಿ ಸಮುಚ್ಚಯ ನಿರ್ಮಾಣ

Update: 2024-02-16 06:24 GMT

ಬೆಂಗಳೂರು, ಫೆ.16: ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿರುವ 2024-25ನೇ ಸಾಲಿನ ಬಜೆಟ್ ನಲ್ಲಿ ಕಾರ್ಮಿಕರ ಕಲ್ಯಾಣಕ್ಕೆ ಘೋಷಿದ ಯೋಜನೆಗಳು ಇಂತಿವೆ.

• ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ವಲಸೆ ಹೋದ ಸಂದರ್ಭದಲ್ಲಿ ಅವರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸಲು ಆಯ್ದ 10 ಜಿಲ್ಲೆಗಳಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ತಾತ್ಕಾಲಿಕ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗುವುದು.

• ನಮ್ಮ ಸರ್ಕಾರವು ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (Gig Workers) ಬದುಕಿನ ಭದ್ರತೆಗಾಗಿ Platform-Based Gig Workers Fund and Welfare Fee Bill ಎಂಬ ಹೊಸ ವಿಧೇಯಕವನ್ನು ಜಾರಿಗೆ ತರಲಿದೆ. ಆ ಮೂಲಕ ಅರ್ಹ ಆನ್-ಲೈನ್ ವಹಿವಾಟುಗಳ ಮೇಲೆ ಸೆಸ್ ವಿಧಿಸಿ ಗಿಗ್ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

• ಪ್ರಸಕ್ತ ಆಶಾದೀಪ ಯೋಜನೆಯಡಿ ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೀಡುವ ಸೌಲಭ್ಯವನ್ನು ವಿಸ್ತರಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು;

• ಮಾಲಕರಿಗೆ ವರ್ಗಾಯಿಸುವ ಶಿಷ್ಯ ವೇತನದ ಅವಧಿಯನ್ನು ಆರು ತಿಂಗಳಿನಿಂದ ಒಂದು ವರ್ಷಕ್ಕೆ ಹೆಚ್ಚಿಸಲಾಗುವುದು.

• ಅಪ್ರೆಂಟಿಸ್ ತರಬೇತಿ ಪಡೆದವರನ್ನು ಅದೇ ಮಾಲಕರು ಖಾಯಂ ಆಗಿ ನೇಮಕಾತಿ ಮಾಡಿಕೊಂಡಲ್ಲಿ ಮಾಲಕರಿಗೆ ವೇತನ ಮರುಪಾವತಿ ಮಾಡುವ ಅವಧಿಯನ್ನು ಒಂದು ವರ್ಷದಿಂದ ಎರಡು ವರ್ಷಗಳ ಅವಧಿಗೆ ಹೆಚ್ಚಿಸಲಾಗುವುದು ಹಾಗೂ ವೇತನದ ಗರಿಷ್ಠ ಮಿತಿಯನ್ನು 6,500 ರಿಂದ 7,000 ರೂ. ಗಳಿಗೆ ಹೆಚ್ಚಿಸಲಾಗುವುದು.

• •ಹೊಸದಾಗಿ ಖಾಯಂ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳ ಮಾಸಿಕ 6,000 ರೂ.ಗಳ ಗರಿಷ್ಠ ವೇತನವನ್ನು ಎರಡು ವರ್ಷಗಳವರೆಗೆ ಮಾಲಕರಿಗೆ ಮರುಪಾವತಿ ಮಾಡಲಾಗುವುದು.

• ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ವಲಸೆ ಹೋದ ಸಂದರ್ಭದಲ್ಲಿ ಅವರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸಲು ಆಯ್ದ 10 ಜಿಲ್ಲೆಗಳಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ತಾತ್ಕಾಲಿಕ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗುವುದು.

• ವಾಣಿಜ್ಯ ಸಾರಿಗೆ ವಾಹನಗಳ ನೋಂದಣಿಯ ಮೇಲೆ ಸುಂಕವನ್ನು ವಿಧಿಸುವ ಮೂಲಕ ಸಾರಿಗೆ ವಾಹನಗಳ ಕಾರ್ಮಿಕರಿಗೆ ಭದ್ರತಾ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ರೂಪಿಸಲಾಗುವುದು. ಅಲ್ಲದೇ, ವಾಹನ ಚಾಲಕರಿಗೆ ನಿಲ್ದಾಣ/ಹೆದ್ದಾರಿ ಬದಿಯಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ ವಹಿಸಲಾಗುವುದು.

• ಇ.ಎಸ್.ಐ. ಯೋಜನೆಯಡಿ ಒಟ್ಟಾರೆ 311 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆಗಳು, Point of Care Mobile Digital Diagnostic Kiosk, Mobile Health Unit, 40 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಸಮಗ್ರ ಆರೋಗ್ಯ ತಪಾಸಣೆ, ಎಲ್ಲಾ ವಿಮಾದಾರರಿಗೆ Tetanus ಮತ್ತು Hepatitis ಲಸಿಕೆ ಕಾರ್ಯಕ್ರಮ ಹಾಗೂ ಅತ್ಯಾಧುನಿಕ ರೋಗಪತ್ತೆ ಹಚ್ಚುವ ಕೇಂದ್ರ ಸ್ಥಾಪನೆ ಮುಂತಾದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News