ತುಮಕೂರು | ಮೌಢ್ಯಾಚರಣೆಗೆ ಮಗು ಬಲಿ ಪ್ರಕರಣ: ಮೂವರ ವಿರುದ್ಧ FIR

Update: 2023-07-28 10:09 IST
ತುಮಕೂರು | ಮೌಢ್ಯಾಚರಣೆಗೆ ಮಗು ಬಲಿ ಪ್ರಕರಣ: ಮೂವರ ವಿರುದ್ಧ FIR

ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಸಿವಿಲ್ ನ್ಯಾಯಾಧೀಶೆ

  • whatsapp icon

ತುಮಕೂರು: ಹೆರಿಗೆ ನಂತರ ಬಾಣಂತಿ ಮತ್ತು ನವಜಾತ ಶಿಶುವನ್ನು ಊರಾಚೆಯ ಗುಡಿಸಲಲ್ಲಿ ಇಟ್ಟಿದ್ದ ಆರೋಪದ ಮೇಲೆ ಬಾಣಂತಿಯ ತಂದೆ, ತಾಯಿ ಮತ್ತು ಪತಿಯ ವಿರುದ್ಧ ಗುರುವಾರ ಕೋರಾ ಪೊಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ನೂರುನ್ನಿಸಾ ಅವರು ಗುರುವಾರ ಅಧಿಕಾರಿಗಳ ತಂಡದೊಂದಿಗೆ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಗುಡಿಸಲಿಗೆ ಭೇಟಿ ನೀಡಿ, ಗುಡಿಸಲಲ್ಲಿ ಇರಿಸಲಾಗಿದ್ದ ಬಾಣಂತಿಯನ್ನು ಮನೆಗೆ ಸೇರಿಸಿದ್ದರು. ಮತ್ತು ನವಜಾತ ಶಿಶುವಿನ ಸಾವಿಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದರು.

ಇದೀಗ ತುಮಕೂರು ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ನೀಡಿರುವ ದೂರಿನನ್ವಯ ಮೂವರ ವಿರುದ್ದ ಎಫ್‌ಐ‌ಆರ್ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News