ಉಡುಪಿ: ತಾಲೂಕು ಆಫೀಸಿನ ದಾಖಲೆಗಳು ಕಳವು; ಪ್ರಕರಣ ದಾಖಲು
Update: 2023-09-30 08:45 GMT
ಉಡುಪಿ, ಸೆ.30: ಉಡುಪಿ ತಾಲೂಕು ಕಛೇರಿಯ ಅಧೀನಕ್ಕೆ ಒಳಪಟ್ಟಿದ್ದ ಬನ್ನಂಜೆಯಲ್ಲಿರುವ ಗಾಂಧಿ ಭವನದಲ್ಲಿ ಶೇಖರಿಸಿ ಇಟ್ಟಿದ್ದ ದಾಖಲೆಗಳು ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಧಿ ಭವನದಲ್ಲಿ ತಾಲೂಕು ಕಚೇರಿಯ ದಾಖಲೆಗಳನ್ನು ಹಿಂದಿನಿಂದಲೂ ಶೇಖರಿಸಿಡುತ್ತಿದ್ದು, ಆ.15ರಿಂದ ಸೆ.26ರ ನಡುವೆ ಗಾಂಧಿ ಭವನದ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದಾಖಲೆಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಉಡುಪಿ ತಾಲೂಕು ಕಛೇರಿಯ ಪ್ರಥಮ ದರ್ಜೆ ಸಹಾಯಕ ನಟರಾಜ್ ದೂರಿನಲ್ಲಿ ತಿಳಿಸಿದ್ದಾರೆ.